ಶುಕ್ರವಾರ, ನವೆಂಬರ್ 26, 2021

ಜನಪ್ರೀಯತೆ ಬಳಿಕ ಉಂಡ ಮನೆಗೆ ದ್ರೋಹ ಬಗೆಯುವ ಭಾಗವತರು?! ಯಕ್ಷ ರಂಗದಲ್ಲಿ ಇದೇನಿದು?

ಹೌದು! ಹೀಗೊಂದು ಮಾತು ಯಕ್ಷ ರಂಗದಲ್ಲಿ ಪ್ರಚಲಿತದಲ್ಲಿದೆ.ಒಂದೆರಡು ವರ್ಷಗಳ ಹಿಂದೆ ಯಕ್ಷಗಾನ ಭಾಗವತರಾದ ಕಟೀಲು ಮೇಳದ ಪಟ್ಲ ಸತೀಶ್ ಶೆಟ್ಟಿಯವರ ಬಗ್ಗೆ ನಾವು ಕೇಳಿದ್ದೆವು., ಸ್ಟಾರ್ ಪಟ್ಟ ತಂದು ಕೊಟ್ಟದ್ದು ಕಟೀಲು ಮೇಳ. ಪ್ರತಿಭೆ ಇದ್ದರೂ ಅವಕಾಶ, ವೇದಿಕೆ ಜನಪ್ರೀಯತೆಯ ಹಾದಿ ಕಟೀಲು ಮೇಳವೇ ಆಗಿತ್ತು. ಮೇಳದಲ್ಲಿ ಸಾಕಷ್ಟು ವರ್ಷಗಳ ಕಾಲ ಪ್ರಧಾನ ಭಾಗವತರಾಗಿದ್ದ ಪಟ್ಲರವರು ಯಂಗ್ ದುನಿಯಾಕ್ಕೆ ಹಾಟ್ ಫೇವರೆಟ್ ಆಗಿದ್ದರು .ತನ್ನ ಕಂಚಿನ ಕಂಠದ ಸ್ವರ ಮಾಧುರ್ಯ ದಿಂದ ಎಲ್ಲೆಡೆ ಪ್ರಖ್ಯಾತಿಯನ್ನು ಪಡೆದುಕೊಂಡರು. ಹೋದಲ್ಲಿ ಬಂದಲ್ಲಿ ಎಲ್ಲೆಂದರಲ್ಲಿ ಗೌರವ,ಸನ್ಮಾನಕ್ಕೆ ಕೊರತೆ ಇರಲಿಲ್ಲ., ‘ಯಕ್ಷ ದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ)’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ದಾನಿಗಳಿಂದ ಹಣ ಸಂಗ್ರಹಿಸಿ ಯಕ್ಷರಂಗದಲ್ಲಿರುವ ಅಸಹಾಯಕರಿಗೆ ಸಹಾಯ ಹಸ್ತವನ್ನು ಚಾಚುತ್ತಿದ್ದ ಇವರ ಸನ್ನಡೆಗೆ, ಅಭಿಮಾನ ಮತ್ತಷ್ಟು ಉತ್ತುಂಗಕ್ಕೆ ಏರಿತ್ತು.ಅಲ್ಲಲ್ಲಿ ನಡೆಯುವ ವಿಶೇಷ ತಾಳ -ಮದ್ದಳೆ ಕಾರ್ಯಕ್ರಮ ಸೇರಿದಂತೆ ಅತಿಥಿಯಾಗಿ ಭಾಗವಹಿಸುವ ಶೆಡ್ಯೂಲ್ ತುಂಬಾನೇ ಬ್ಯುಸಿ ಯಾಗಿತ್ತು. ಇತ್ತ ಮೇಳವನ್ನು ಸರಿದೂಗಿಸಬೇಕಿತ್ತು. ಪ್ರತಿದಿನ ಬೇರೆ ಕಾರ್ಯಕ್ರಮಗಳ ಸಂಖ್ಯೆಗೆ ಮಿತಿ ಇಲ್ಲದಾಗ ಇತ್ತ ಮೇಳಕ್ಕೆ ಹಾಜರಾಗುವುದು ಅಪರೂಪವಾಗಿತ್ತು .ಮೇಳವನ್ನು ಮರೆತೇಬಿಟ್ಟರೆಂಬಂತಿದ್ದ ಇವರ ಈ ನಡೆ ಮೇಳದ ಯಜಮಾನರಿಗೆ, ಸಂಚಾಲಕರಿಗೆ ತೃಪ್ತಿ ತಂದಿಲ್ಲ. ಸರಿಯಾದ ವಿಚಾರವೂ ಹೌದು .ತಾವು ಕರ್ತವ್ಯ ನಿರ್ವಹಿಸುತ್ತಿರುವ ಮೇಳಕ್ಕೆ ಮುಖ್ಯವಾಗಿ ಒತ್ತುನೀಡಬೇಕು.ಮತ್ತುಳಿದ ಕೆಲಸಗಳು ಬಿಡುವಿನ ಸಮಯದಲ್ಲಿ ಇರಿಸಿಕೊಂಡರೇ ತಮ್ಮಗೌರವ ಇಮ್ಮಡಿಯಾಗುತ್ತದೆ,ಕಲಾವಿದನಿಗೆ ಗೌರವ ದೊರಕುವುದು ಸಹ ದಿಟ. ತಮಗೆ ಪುರ್ಸೊತ್ತು ಇದ್ದಾಗ ರಂಗ ಮಂಚ ಏರುತ್ತಿದ್ದ ಪಟ್ಲರ ಈ ಅನೀತಿಯಿಂದ ಕಟೀಲು ಮೇಳ ದಿಂದ ಹೊರಗುಳಿಯಬೇಕಾಯಿತು. ಈಗ ಮತ್ತೊಬ್ಬ ಸ್ಟಾರ್ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯರವರು ಇದೆ ಕಾರಣ ದಿಂದ ಪೆರ್ಡೂರು ಮೇಳದಿಂದ ಕೈಬಿಡಲಾಗಿದೆ ಅಂತೆ!
ಅತ್ತ ತೆಂಕು ತಿಟ್ಟಿನಲ್ಲಿ ಪಟ್ಲ ಸತೀಶ್ ಶೆಟ್ಟಿಯಾದರೇ ಇತ್ತ ಬಡಗಿನಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯದ್ದೇ ಪಾರಂಪತ್ಯ. ಆಧುನಿಕ ದಿನದಲ್ಲಿ ಪ್ರಸಿದ್ದಿ ಪಡೆದ ಭಾಗ್ಯವಂತ ಭಾಗವತರುಗಳು . ಸಾಕಷ್ಟು ವರ್ಷಗಳಿಂದ ಮಾರಣ ಕಟ್ಟೆ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯರವರು,ವಯಸ್ಸಿನ ಕಾರಣದಿಂದ ಸುಮಾರು 25ಕ್ಕೂ ಅಧಿಕ ವರ್ಷಗಳ ಕಾಲ ಸಮರ್ಥವಾಗಿ ಭಾಗವತರಾಗಿ ನಿರ್ದೇಶಕರಾಗಿ ಒಂದಿನಿತು ಕಪ್ಪು ಚುಕ್ಕೆ ಇಲ್ಲದಂತೆ ಕರ್ತವ್ಯ ನಿರ್ವಹಿಸಿದ್ದ ಸುಬ್ರಹಣ್ಯ ಧಾರೇಶ್ವರ ಅವರು ನಿವೃತ್ತಿ ಪಡೆದಾಗ ಅವರ ಜಾಗವನ್ನು ತುಂಬ ಬಲ್ಲ ಉತ್ತಮ ಭಾಗವತರಾಗಿ ಗುರುತಿಸಿಕೊಂಡವರು ಜನ್ಸಾಲೆ ರಾಘವೇಂದ್ರ ಆಚಾರ್ಯರವರು. ಅವರನ್ನು ಪೆರ್ಡೂರು ಮೇಳದ ಯಜಮಾನರಾದ ಕರುಣಾಕರ ಶೆಟ್ಟಿಯವರು ಕರೆತಂದು ನಿಯುಕ್ತಿಗೊಳಿಸಿದರು.ಸುಮಾರು 9ವರ್ಷಗಳ ಕಾಲ ಪೆರ್ಡೂರು ಮೇಳವನ್ನು ಮುನ್ನೆಡಿಸಿದ ಕೀರ್ತಿ ಅವರಿಗೆ ಸಲ್ಲದೇ ಇರದು. ಎಲ್ಲೂ ಚ್ಯುತಿ ಬಾರದಂತೆ ಯಕ್ಷಗಾನ ಕಲಾವಿದರ ಜೊತೆಗೆ,ಪ್ರಸಂಗ ಕರ್ತರ,ಸಂಘಟಕರ ಜೊತೆ ಇದ್ದ ಜನ್ಸಾಲೆ ಈ ವರ್ಷ ಅದೇನು ಆಯ್ತೋ ಗೊತ್ತಿಲ್ಲ ಇನ್ನೇನು ಮೇಳ ತಿರುಗಾಟ ಪ್ರಾರಂಭಿಸುವ ಬೆರಳಣಿಕೆ ದಿನಗಳಿರುವ ಸಂದರ್ಭದಲ್ಲಿ ದೀಢೀರ್ ಹೊರ ಬಿದ್ದಾಗ ಯಕ್ಷ ಪ್ರೇಮಿಗಳಲ್ಲಿ,ಜನ್ಸಾಲೆ ಅಭಿಮಾನಿಗಳಲ್ಲಿ ಕೋಲಾಹಲ ,ಕುತೂಹಲ ಉಂಟಾಗಿದ್ದುಸುಳ್ಳಲ್ಲ! ಮೇಳದ ವ್ಯವಸ್ಥೆಗೆ ಜನ್ಸಾಲೆ ಒಗ್ಗಿ ಕೊಳ್ಳದ ಹಿನ್ನಲೆಯಲ್ಲಿ ಮೇಳದಿಂದ ಕೈ ಬಿಡಲಾಗಿದೆ ಎಂಬ ಮಾತು ಮೇಳದ ಯಜಮಾನರಿಂದ ಬಂದಿದೆ.ವಾಸ್ತವಾಂಶ ಇಲ್ಲದೇ ಇರದು ದಿನ ದಿಂದ- ದಿನಕ್ಕೆ ಜನಪ್ರೀಯತೆಯ ನಾಗಾಲೋಟದಲ್ಲಿರುವ ಜನ್ಸಾಲೆಗೆ ಕಾರ್ಯಕ್ರಮಕ್ಕೆ ಬರಗಾಲ ವಿರಲಿಲ್ಲ ಅನೂದಿನವೂ 2-3ಕಾರ್ಯಕ್ರಮ ಫಿಕ್ಸ್! ಇದರಿಂದ ಮೇಳದ ಭವಿಷ್ಯದ ಚಿಂತನೆ, ಮೇಳದ ಕಲಾವಿದರು ಬೇರೆಡೆ ಅತಿಥಿಯಾಗಿ ತೆರಳಬಾರದೆಂದು ಕಟ್ಟಪ್ಪಣೆ ಹೊರಡಿಸಿದ ಪರಿಣಾಮ ಜನ್ಸಾಲೆ ಇದಕ್ಕೆ ಹೊಂದಿಕೊಳ್ಳದ ಕಾರಣ ಅವರನ್ನು ಬಿಡಬೇಕಾಯಿತು. ಇದು ಈ ವರ್ಷ ಇನ್ನೊಂದು ಪ್ರಸಿದ್ಧ ಡೇರೆ ಮೇಳವಾದ ಕಿಶನ್ ಹೆಗ್ಡೆ ನೇತೃತ್ವದ ಸಾಲಿಗ್ರಾಮ ಮೇಳದಲ್ಲೂ ಸಹಾ ಈ ಕಂಡೀಷನ್ ಜಾರಿಯಾಗಿದ್ದು ಅವರ ಕೈಪಿಡಿ, ಬ್ಯಾನರ್ ನಲ್ಲೂ ಮುದ್ರಿಸಲಾಗಿದೆ. ಜನ್ಸಾಲೆ ಕಂಡಿಷನ್ ಗೆ ಒಪ್ಪದೇ ಇದ್ದಾಗ ಬೀಳ್ಕೊಡಬೇಕಾಯಿತು ಎಂದು ಹೇಳಲಾಗುತ್ತಿದೆ. ನನ್ನನ್ನು ನಾನು ಮಾರಿಕೊಳ್ಳುದಿಲ್ಲ ಎಂದು ಸೀದಾ ಹೊರನಡೆದಿದ್ದಾರೆ .ಜನ್ಸಾಲೆ ಯವರ ಮುಂದಿನ ನಡೆ ಗೊತ್ತಿಲ್ಲ .ಪ್ರಸ್ತುತ ಮತ್ತದೇ ಜಾಗಕ್ಕೆ ಸುಬ್ರಹ್ಮಣ್ಯ ಧಾರೇಶ್ವರರು ಆಗಮಿಸಿದ್ದಾರೆ. ಪಟ್ಲ ಸತೀಶ್ ಶೆಟ್ಟಿಯವರು ಮುಂದೇನು ಮಾಡಲಿದ್ದಾರೆ ಎಂಬ ಸಂದರ್ಭದಲ್ಲಿ ಅವರು ನಾಗವೃಜ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕ್ಷೇತ್ರದ ಪಾವಂಜೆಯ ಮೇಳವನ್ನು ಕಟ್ಟಿದರು ನೂತನ ಮೇಳ ಹೊರಡಿಸಿ ಯಶಸ್ವೀಯಾದರು.ಕಟೀಲು ಮೇಳದಲ್ಲಿ ಜಾಗ ಇಲ್ಲದಿದ್ದರೂ ಇಲ್ಲಿ ಫಲ ದಕ್ಕಿಸಿಕೊಂಡಿದ್ದಾರೆ.ಆದರೆ ಪೆರ್ಡೂರು ಮೇಳ ತೊರೆದ ಜನ್ಸಾಲೆ ರಾಘವೇಂದ್ರರ ಮುಂದಿನ ನಡೆ ಏನು ಎಂದು ಯಕ್ಷ ಚಾವಡಿಯಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ ! ಇದೀಗ ಎಲ್ಲಾ ಮೇಳಗಳೂ ತಿರುಗಾಟ ಪ್ರಾರಭಿಸಿದೆ ಯಾವ ಮೇಳಕ್ಕೂ ಅಧಿಕ್ರತವಾಗಿ ಜನ್ಸಾಲೆ ಸ್ಥಾನ ಪಡೆಯುವಂತಿಲ್ಲ.ಈ ವರ್ಷ ತಾಳ -ಮದ್ದಳೆ ಹಾಗೂ ಅತಿಥಿಯೇ ಗತಿ ಎಂಬಂತಾಗಿದೆ.

ಶನಿವಾರ, ನವೆಂಬರ್ 20, 2021

ರೈತರ ಎದುರು ಮಂಡಿಯೂರಿದರೇ ಪ್ರಧಾನಿ ? ಮೋದಿಯ ಭಾವುಕತೆಯ ಭಾಷಣದ ಅರ್ಥವೇನು ?

ನವೆಂಬರ್ 19 ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ,ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುನಾನಕ್ ಜಯಂತಿಯ ಶುಭಕೋರುತ್ತಾ , ದೇಶದ ಜನತೆಗೆ ಕ್ಷಮೆ ಯಾಚಿಸಿದ್ದು ನಿಜಕ್ಕೂ ಬೇಸರ ತರಿಸಿತ್ತು . ಕೇಂದ್ರ ಸರಕಾರ ಜಾರಿಗೆ ತಂಡ ಮೂರು ಕೃಷಿ ಮಸೂದೆಯನ್ನು ಹಿಂತೆಗೆದು ಕೊಳ್ಳಲಾಗುವುದು ರೈತರಿಗೆ ಅರ್ಥೈಸುವಲ್ಲಿ ವಿಫಲರಾಗಿದ್ದೇವೆ ,ರೈತರೇ ತಮ್ಮ ಹೋರಾಟವನ್ನು ಕೊನೆಗಾಣಿಸಿ, ಹೊಲಕ್ಕೆ ಸಾಗಿ ಎಂದು ಭಾವುಕತೆಯನ್ನು ವ್ಯಕ್ತಪಡಿಸಿದರು . ರೈತರೆಂಬ ಹಣೆಪಟ್ಟಿಯಲ್ಲಿರುವವರಿಗೆ ,ಪ್ರತಿ ಪಕ್ಷದವರಿಗೆ,ವಿರೋಧಿಗಳ ಸಂತೋಷಕ್ಕೆ ಮಾತ್ರ ಪಾರವೇ ಇರಲಿಲ್ಲ . ಮೋದಿ ಸೋತರು ,ರೈತರು ಗೆದ್ದರು ಎಂಬ ಅಭಿಪ್ರಾಯದ ಜೊತೆಗೆ ಮುಂಬರುವ ಜುನಾವಣೆಯನ್ನು ದ್ರಷ್ಟಿಯಲ್ಲಿತ್ತು ಕೊಂಡು ಮೋದಿ ವಾಪಸ್ ಪಡೆದರು ಎಂಬೆಲ್ಲಾ ಮಾತು ಹರಿದಾಟುತ್ತಿವೆ . ಒಟ್ಟಾರೆ ಕ್ರಷಿ ಕಾಯ್ದೆಯನ್ನು ಹಿಂಪಡೆಯಲು ಕಾರಣವೇನು ?
ಮೂರು ಕ್ರಷಿ ತಿದ್ದುಪಡಿ ಮಸೂದೆ ಪ್ರಸ್ತಾಪಕ್ಕೆ ಬಂದು ಹೆಚ್ಚು ಕಮ್ಮಿ ಒಂದುವರ್ಷ ದಾಟಿದೆ . ಇದರ ನಡುವೆ ಸಾಕಷ್ಟ ಚುನಾವಣೆಗಳೂ ಬಂದೂ ಹೋಗಿವೆ ,ಪ್ರತಿಭಟನೆಗೆ ನಾಂದಿ ಹಾದಿ , ಹರತಾಳ ಮುಂದುವರಿಯುತ್ತಲೇ ಇವೆ . ಒಂದಷ್ಟು ರೈತರು ಪ್ರಾಣವನ್ನೂ ಕಳೆದು ಕೊಂಡರು ಅಂತಹ ಸಮಯದಲ್ಲಿಈ ಕಾಯ್ದೆಯನ್ನು ಹಿಂದೆ ತೆಗೆದು ಕೊಳ್ಳದ ಮೋದಿ, ಅದ್ಯಾಕೆ ನ.19 ರ ದಿನ ಅದೂ ,ಗುರುನಾನಕ್ ಜಯಂತಿಯಂದೇ ಈ ತೀರ್ಮಾನಕ್ಕೆ ಬಂದರು ಎಂಬದು ಯಕ್ಷಪ್ರಶ್ನೆ ? ಕ್ರಷಿ ಕಾಯ್ದೆ ವಿರೋಧಿಸಿದವರ ಸಿಂಹ ಪಾಲು ಪಂಜಾಬ್ ರಾಜ್ಯದ ರೈತರು . ಸಿಖ್ಖರಿಗೆ ಗುರುನಾನಕ್ ದೇವರು . ಮುಂದೆ ಚುನಾವಣೆ ಸಮೀಪ ವಿರುವುದು ಕೂಡಾ ಪಂಜಾಬ್ ರಾಜ್ಯದಲ್ಲೇ.ಹೀಗಾಗಿಯೇ ಮೋದಿ ಪಂಜಾಬ್ ನಲ್ಲಿ ಓಟ್ ಬ್ಯಾಂಕಿಗ್ ಗೆ ಈ ಕಾರ್ಯಕ್ಕೆ ಮುಂದಾದರೇ ? ಎಂಬ ಮಾತುಗಳು ಪಚಲಿತದಲ್ಲಿವೆ.ಕಾಂಗ್ರೆಸ್ ನ ಬಲಿಷ್ಠ ಕೋಟೆ ಪಂಜಾಬ್ ನಲ್ಲಿ ಕಮಲ ಅರಳುವುದು ಅಷ್ಟೊಂದು ಸುಲಭದ ಮಾತು ಅಲ್ಲ . ಇನ್ನು ಮೋದಿ ಮೇಲೆ ಕಿಡಿಕಾರುತ್ತಿರುವ ಪಂಜಾಬಿಗರಿಂದ ಓಟ್ ದಕ್ಕಿಸಿಕೊಳ್ಳುವುದು ಸಹ ಕಷ್ಟ ಸಾಧ್ಯ . ಇಂತಿಪ್ಪ ಮೋದಿ ಯಾಂಡ್ ಟೀಮ್ ಅದರ ಬಗ್ಗೆ ಖಂಡಿತವಾಗಿಯೂ ಸೋತಿದ್ದಲ್ಲ 'ನಾ ಕೊಡೆ ನೀ ಬಿಡೆ' ಎನ್ನವಂತ ಸ್ಥಿತಿಗೆ ಅಂತ್ಯ ಹಾಡಲೇ ಬೇಕಿತ್ತು ಅದಕ್ಕಾಗಿ ಈ ತೀರ್ಮಾನಕ್ಕೆ ಬಂದಿರಬಹದು . ಅದೇನೇ ಇರಲಿ ಭಾರವಾದ ಧ್ವನಿಯಲ್ಲಿ ಭಾವನೆಯನ್ನು ಮೇಳೈಸುತ್ತಿದ್ದ ಪ್ರಧಾನಿ ಮೋದಿ ಮಾತಿನಲ್ಲಿ ಅರ್ಥವಿತ್ತು ನಾವು ರೈತರಿಗೆ ಅರ್ಥೈಸಿ ಹೇಳುವಲ್ಲಿ ಸೋತಿದ್ದೇವೆ ನಾವೀದನ್ನು ಸಂಸತ್ತಿನಲ್ಲಿ ಚರ್ಚಿಸಿ ಹಿಂದಕ್ಕೆ ತೆಗೆದು ಕೊಳ್ಳುತ್ತೇವೆ ಅಂದಾಗ ನಿಜವಾದ ರೈತರಿಗೆ ದುಃಖದ ಕಟ್ಟೆ ಒಡೆಯದೇ ಇರಲಾರದು . ರೈತರ ಶ್ರಯೋಭಿರುವುದ್ದಿಗಾಗಿ ತಂದ ಕಾಯ್ದೆ ರೈತರಿಗೆ ಬೇಡವೆಂದ ಮೇಲೆ ಇನ್ನೇನು ಮಾಡಲು ಸಾಧ್ಯ ? ತಮ್ಮ ಲಾಭಕ್ಕಾಗಿ ಮಧ್ಯವರ್ತಿಗಳು ಒಂದಷ್ಟು ರೈತರನ್ನು ಎತ್ತಿಕಟ್ಟಿ ಕೊನೆಗೂ ತಮ್ಮ ಆಸೆ ತೀರಿಸಿ ಕೊಂಡಿವೆ .ತಮ್ಮ ಕಾಲಿಗೆ ತಾವೇ ಕೊಡಲಿಪೆಟ್ಟು ಕೊಟ್ಟು ಕೊಂಡ ರೈತರು ಮುಂದೆ ಅನುಭವಿಸಲೇಬೇಕಾಗಿದೆ.