ಭಾನುವಾರ, ಅಕ್ಟೋಬರ್ 18, 2020

ಪವರ್ ಟಿವಿಯನ್ನು ಬಂದ್ ಮಾಡಿಸಿದ್ದು ಯಾರು ?

ಪವರ್ ಟಿವಿಯನ್ನು ಸ್ಥಗಿತ ಗೊಳಿಸಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ರಾಜ್ಯ ಮಟ್ಟದ ಪವರ್ ಟಿವಿ ಮಂಗಳೂರು ಮೂಲದ ರಾಕೇಶ್ ಶೆಟ್ಟಿ ಎಂಬುವವರ ಒಡೆತನವನ್ನು ಹೊಂದಿತ್ತು . ಕಳೆದ ಒಂದಷ್ಟು ದಿನಗಳಿಂದ ಸಿಎಂ ಯಡಿಯೂರಪ್ಪನ ಮಗ ಬಿ.ಎಸ್ ವಿಜೇಯೇಂದ್ರರವರ ಭ್ರಷ್ಟಾಚಾರದ ವಿರುದ್ಧ ಗಂಟೆ ಗಟ್ಟಲೇ ನಿರಂತರ ಕಾರ್ಯಕ್ರಮವನ್ನು ಬಿತ್ತರಿಸುತ್ತಾ ಬಂದಿತ್ತು ಸಂಸತ್ ಅಧಿವೇಶದಲ್ಲಿ ಪ್ರತಿ ಪಕ್ಷಗಳು ಈ ವಿಚಾರವನ್ನು ಎಳೆದು ತಂದವು ಯಡಿಯೂರಪ್ಪನವರು ಸದನದಲ್ಲಿ ನೇರ ಸವಾಲು ಹಾಕಿದ್ದರು "ಭ್ರಷ್ಟಾಚಾರ ಆರೋಪ ಸಾಬೀತು ಆದರೆ ನಾನು ರಾಜೀನಾಮೆ ಕೊಡುತ್ತೇನೆ ಹಾಗೂ ಶಾಶ್ವತ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ" ಎಂಬ ಮಾತು ಹೊರಹಾಕಿದ್ದರು .
ಇತ್ತ ಪವರ್ ಟಿವಿಯೂ ತಮ್ಮೆಲ್ಲಾ ಪವರ್ ನೊಂದಿಗೆ ಕಾರ್ಯಕ್ರಮವನ್ನು ಸತತವಾಗಿ ಪ್ರಸಾರ ಮಾಡುತ್ತಾ ಬರುತ್ತಿತ್ತು . ವಿಜೇಂದ್ರ ಮುಖ್ಯವಾಹಿನಿಗೆ ಬಂದು ಯಾವುದೇ ಪ್ರತಿಕ್ರೀಯೆ ನೀಡಿರಲಿಲ್ಲ . ಟ್ವಿಟ್ಟರ್ ಮೂಲಕ ಒಂದೆರಡು ಪೋಸ್ಟ್ ಮಾಡಿದ್ದರು ."ಸತ್ಯಕ್ಕೆ ದೂರವಾದ ವಿಚಾರವನ್ನು ಪವರ್ ಟಿವಿಯಲ್ಲಿ ಬಿತ್ತರಿಸಲಾಗುತ್ತಿದೆ ನನ್ನ ತೇಜೋವಧೆ ಮಾಡಲಾಗುತ್ತದೆ. ಎಂದು ಮಾನನಷ್ಟ ಮೊಕದ್ದಮೆ ಯಡಿಯಲ್ಲಿ ಕೇಸು ದಾಖಲಿಸಿದ್ದೇನೆ "ಎಂದು ಬರೆದು ಕೊಂಡಿದ್ದರು. ಒಂದೆರಡು ದಿನ ಉರುಳಿಲ್ಲ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಮನೆ ಮೇಲೆ ಪೊಲೀಸರ ದಾಳಿ ಆಗುತ್ತದೆ.,ಪ್ರಿನ್ಸಿಪಲ್ ಎಡಿಟರ್ ರೆಹಮಾನ್ ಹಾಸನ್ ರವನ್ನು ಪೊಲೀಸರು ವಿಚಾರಣೆಗೆ ಠಾಣೆಗೆ ಕರೆಸಿಕೊಳ್ಳುತ್ತಾರೆ. ಇತ್ತ ಪವರ್ ಟಿವಿ ಕಚೇರಿ ಬಂದ ಪೊಲೀಸರು ಬೇಕಾದಷ್ಟು ಡೀಟೇಲ್ಸ್ ಜಪ್ತಿ ಮಾಡುತ್ತಾರೆ ಎಲ್ಲಾಕ್ಕಿಂತ ಹೆಚ್ಚಾಗಿ ಸರ್ವರ್ ಗೆ ಕೈ ಹಾಕಿ ಅದನ್ನು ಸ್ಥಗಿತ ಗೊಳಿಸುತ್ತಾರೆ . ಅಂದಿನಿಂದ ಇಂದಿನವರಿಗೆ ಪವರ್ ಟಿವಿ ಕ್ಲೋಸ್ ಆಗಿದೆ. ಆಂಕರ್ ಗಳು ತಮ್ಮ fb ಲೈವ್ ನಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ . ಆದಷ್ಟು ಬೇಗ ಮತ್ತೆ ನಾವು ಬರುತ್ತೇವೆ ಎಂದಿದ್ದಾರೆ ಹಾಗೆಯೇ ಸಂಪಾದಕೀಯ ಸಲಹೆಗಾರರಾದ ರವೀಂದ್ರ ರೇಷ್ಮೆಯವರು " ಒಂದೊಳ್ಳೆ ಲಾಯರ್ ನಮ್ಮ ಕೇಸನ್ನು ಎತ್ತಿ ಕೊಂಡಿದ್ದಾರೆ ಬೇಗ ಆನ್ ಏರ್ ನಲ್ಲಿ ಬರುತ್ತೇವೆ "ಎಂದು ಹೇಳಿದ್ದರು . ಎರಡು ವಾರ ಕಳೆದರೂ ಇನ್ನೂ ಪವರ್ ಟಿವಿಯ ಸುದ್ದಿಯೇ ಇಲ್ಲ . ಇದನ್ನೇ ನಂಬಿ ಕೊಂಡಿದ್ದ ೨೫೦ ಕ್ಕೂ ಅಧಿಕ ನೌಕರರ ಕೆಲಸಕ್ಕೆ ಕತ್ತರಿ ಬಿದ್ದಿದೆ . ಪವರ್ ಟಿವಿಯ ಪ್ರಕಾರ ನಮ್ಮ ಚಾನೆಲ್ ನ್ನು ಸರ್ಕಾರ ಸ್ಥಗಿತ ಗೊಳಿಸಿದೆ ಎಂದು ಬಿಜೆಪಿ ಸಾರಥ್ಯದ ಯಡಿಯೂರಪ್ಪರ ವಿರುದ್ಧ ದೂರುತ್ತಿದ್ದಾರೆ. ಇನ್ನೂ ಬಿಜೆಪಿ ಮುಖಂಡರು ಹೇಳುವುದೇ ಬೇರೆ ನಾವು ಯಾವುದೇ ಚಾನೆಲ್ ನ್ನು ಬಂದ್ ಮಾಡಿಸಿಲ್ಲ.
ಹಾಗಾದರೆ ಬಂದ್ ಮಾಡಿಸಿದ್ದು ಯಾರು ಎಂಬ ಪ್ರಶ್ನೆಗೆ ಒಂದಷ್ಟು ಉತ್ತರ ಜೀವಂತವಾಗಿ ಮೇಲ್ನೋಟಕ್ಕೆ ಹೊಳೆಯುತ್ತಿದೆ.ಪವರ್ ಟಿವಿ ಆಫ್ ಆಗುವ ಒಂದೆರಡು ದಿನಗಳ ಹಿಂದೆ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ರವರು ಪವರ್ ಟಿವಿಯ ಬಗ್ಗೆ ಕಿಡಿಕಾರಿದ್ದರು . ಒಂದಷ್ಟು ಡಾಕ್ಯುಮೆಂಟ್ಸ್ ನ್ನು ತೋರಿಸಿ "ಇದನ್ನು ಹಿಡಿದು ಡೆಲ್ಲಿಗೆ ತೆರಳುತ್ತೇನೆ ಏನು ಮಾಡುತ್ತೇನೆ ನೋಡಿ ಕೊಳ್ಳಿ" ಎಂದು ಬಹಿರಂಗ ಸವಾಲು ಹಾಕಿದ್ದರು. ಇನ್ನೊಂದೆಡೆ ವಿಜೇಯೇಂದ್ರನ ಭ್ರಷ್ಟಾಚಾರಕ್ಕೆ ಸಂಬಂಧ ಪಟ್ಟಂತೆ ಕoಟ್ರಾಕ್ಟರ್ ಒಬ್ಬರಿಗೆ ಆಮಿಷ ಒಡ್ಡಿ ವಿಜೇಂದ್ರನ ಬಗ್ಗೆ ಸುಳ್ಳು ಹೇಳಬೇಕೆಂದು ಒತ್ತಡ ತಂದಿದ್ದರಂತೆ ಪವರ್ ಟಿವಿ ಎಂಡಿ . ಆ ಕಂಟ್ರಾಕ್ಟರ್ ಪೊಲೀಸರಿಗೆ ಕಂಪ್ಲೇಟ್ ಕೊಟ್ಟು ಎಫ್ ಐ ಆರ್ ರಿಜಿಸ್ಟರ್ ಮಾಡಿಸಿದ್ದರಂತೆ ಇದು ಸಹಾ ಪೊಲೀಸ ದಾಳಿಗೆ ಕಾರಣವಾಗಿರ ಬಹುದೇ ಗೊತ್ತಿಲ್ಲ .ಪವರ್ ಟಿವಿ ಎಂ ಡಿ ರಾಕೇಶ್ ಶೆಟ್ಟಿ ವಿಜೇಯೇಂದ್ರರವರಿಗೆ ಯಾವುದೋ ಬೇಡಿಕೆ ಒಡ್ಡಿದ್ದಾರಂತೆ ಅದು ಸಾಧ್ಯವಾಗದ ಹಿನ್ನಲೆಯಲ್ಲಿ ಕತೆ ಕಟ್ಟಿ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ವಿಜೇಂದ್ರ ಹೇಳುತ್ತಿದ್ದಾರೆ ಇನ್ನು ಪವರ್ ಟಿವಿಯವರದ್ದು ಇದಕ್ಕೆ ಭಿನ್ನವಾದ ಅಪವಾದ . ಒಟ್ಟಾರೆ ಇದರಲ್ಲಿ ಯಾರದ್ದು ಸತ್ಯ ಯಾರದ್ದು ಮಿಥ್ಯ ಎಂಬುದು ಕಗ್ಗಂಟಾಗಿ ಉಳಿದಿದೆ. ಸೂಕ್ತ ತನಿಖೆಗೆ ಒಳಪಡಿಸಿ ಯಾರು ಅಪರಾಧಿಗಳೆಂದು ಬಯಲಿಗೆ ತರುವ ಬದಲು ಚಾನೆಲ್ ನ್ನು ಬಂದ್ ಮಾಡಿಸುವುದು ಸರಿಯಲ್ಲ . ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅದನ್ನೇ ನಂಬಿಕೊಂಡ ಅದೆಷ್ಟು ಉದ್ಯೋಗಿಗಳ ಹೊಟ್ಟೆಗೆ ತಣ್ಣೀರು ಬಟ್ಟೆ ಕೊಟ್ಟದ್ದು ಸರಿಯಲ್ಲ . ಸರ್ಕಾರ ಆಲೋಚಿಸಬೇಕು. ಇನ್ನು ಸಾಕಷ್ಟು ಚಾನೆಲ್ ಗಳು ನಮ್ಮಲ್ಲಿ ವಿದೆ ಪತ್ರ ಕರ್ತರ ಸಂಘಟನೆಗಳೂ ,ಜನಪರ ಸಂಘಟನೆಗಳೂ ಸಹಾ ನಮ್ಮಲ್ಲಿ ಕಮ್ಮಿ ಇಲ್ಲ. ಎಲ್ಲರೂ ಸಹಾ ಒಕ್ಕಲೂರಿನಿಂದ ಖಂಡಿಸಬೇಕಿತ್ತು ಆ ಕಾರ್ಯವಾಗಿಲ್ಲ ವಯಕ್ತಿಕ ವಿಚಾರವೇನೇ ಇರಲಿ ಪವರ್ ಟಿವಿ ತಪ್ಪು ಮಾಡಿರಲಿ ಮಾಡದಿರಲಿ ಅವರು ಮಾಡಿದ್ದು ಸರಿ ಎಂದು ವಾದಿಸುವುದಲ್ಲ ಸೂಕ್ತ ನ್ಯಾಯಕ್ಕಾಗಿ ಧ್ವನಿ ಎತ್ತ ಬೇಕಾಗಿತ್ತು. ಕೊನೆಯದಾಗಿ ಒಂದು ಮಾತು ತಪ್ಪು ಯಾರದ್ದೇ ಇರಲಿ ತನಿಖೆ ಯಾಗಬೇಕು ನಿಜ ಬೆಳಕಿಗೆ ಬರಬೇಕು ಅಷ್ಟೇ !

ಬುಧವಾರ, ಅಕ್ಟೋಬರ್ 14, 2020

‘ವಿದ್ಯಾಗಮ’ ಯೋಜನೆಯನ್ನು ಸ್ಥಗಿತ ಗೊಳಿಸುವುದು ಸಮಂಜಸ ಅಲ್ಲ

ವಿದ್ಯಾಗಮ ಯೋಜನೆ ಆರಂಭವಾದ ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪಾಸಿಟಿವ್ ಮತ್ತು ಸಾವು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಒಡ್ಡಿ ಯೋಜನೆಯನ್ನು ಸ್ಥಗಿತ ಮಾಡಲು ಮಾಧ್ಯಮಗಳ ಜೊತೆ ಕೆಲವು ವಿರೋಧ ಪಕ್ಷದ ಮುಖಂಡರುಗಳು ಸರ್ಕಾರದ ಮೇಲೆ ಒತ್ತಡ ತಂದೂ ಅಂತೂ ಸ್ಥಗಿತ ಗೊಂಡಿದೆ . ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂಬುದು ಸರ್ಕಾರದ ಉವಾಚ . ನಿಜಕ್ಕೂ ಸಧ್ಯದ ಪರಿಸ್ಥಿತಿಗೆ ಇದು ಯೋಗ್ಯವಾಗಿದೆ., ಆದರೆ ಇದನ್ನು ಸಂಪೂರ್ಣವಾಗಿ ಸ್ಥಗಿತ ಗೊಳಿಸಬಾರದು ಒಂದಷ್ಟು ಮಾರ್ಪಾಡುಗಳನ್ನು ಮಾಡಿ ಪುನಃ ಪ್ರಾರಂಭಿಸಬೇಕು. ಉತ್ತಮ ಯೋಜನೆಗಳಲ್ಲಿ ಒಂದಾದ ಶಾಲಾ ಮಕ್ಕಳಿಗೆ ಸುರಕ್ಷಿತ ಕ್ರಮಗಳೊಂದಿಗೆ ಕಲಿಕೆಯನ್ನು ಮುಂದುವರೆಸುವ ‘ವಿದ್ಯಾಗಮ’ಯೋಜನೆಯು ಬಡ ,ಮಾಧ್ಯಮ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಮಕ್ಕಳ ಸುರಕ್ಷತೆಗೆ ಹಾಗೂ ವಿದ್ಯಾರ್ಜನೆಗೆ ಇದು ಅನುಕೂಲವಾಗಿತ್ತು . ಏನೀದು ವಿದ್ಯಾಗಮ ಯೋಜನೆ : ತಿರಸ್ಕರಿಸುವ ಮೊದಲು ಯೋಜನೆ ಬಗ್ಗೆ ಅರಿಯಬೇಕಾಗಿದೆ . ಶಾಲೆಗಳು ಪ್ರಾರಂಭವಾಗುವವರೆಗೂ ವಿದ್ಯಾರ್ಥಿಗಳು ವಿದ್ಯೆ ಕಲಿಕೆಯಿಂದ ದೂರವಾಗ ಬಾರದೆನ್ನುವ ಕಾರಣಕ್ಕೆ ವಿದ್ಯಾಗಮ ಯೋಜನೆ ಜಾರಿ ಮಾಡಲಾಗಿತ್ತು. ಗ್ರಾಮೀಣ ಪ್ರದೇಶದ, ನಗರ ಪ್ರದೇಶದ ಸರ್ಕಾರಿ ಮಕ್ಕಳನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿತ್ತು. ರಾಜ್ಯ ಸರ್ಕಾರವು ಆಗಸ್ಟ್ 4ರಂದು ಅಧಿಕೃತ ಆದೇಶ ಜಾರಿಗೆ ತಂದಿತ್ತು. ಸುಮಾರು 47 ಲಕ್ಷ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂಬುದು ಸರ್ಕಾರದ ಯೋಚನಾ ಯೋಜನೆ ಆಗಿತ್ತು . ಅಂತೆಯೇ ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗದಂತೆ ಮಕ್ಕಳಿರುವ ಜಾಗಕ್ಕೆ ಹೋಗಿ ಶಿಕ್ಷಕರು ಪಾಠ ಮಾಡಬೇಕು. ಒಂದೇ ಊರಿನ ಒಂದೇ ತರಗತಿಯ ವಿದ್ಯಾರ್ಥಿಗಳ ಗುಂಪು ಮಾಡಿ . ಗ್ರಾಮದ ದೇವಸ್ಥಾನ, ಸಮುದಾಯ ಭವನ, ಖಾಲಿ ಮನೆ ಹೀಗೆ ಪಾಠ ಮಾಡಲು ಸೂಕ್ತವಾದ ಶುಚಿತ್ವ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂಬುದಾಗಿತ್ತು . ಶಿಕ್ಷಕರು-ಮಕ್ಕಳ ನಿರಂತರ ಸಂಪರ್ಕ, ಮಕ್ಕಳಲ್ಲಿ ಮಾರ್ಗದರ್ಶಿತ ಸ್ವಯಂ ಕಲಿಕೆ, ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯದ ವೃದ್ಧಿ, ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಖಾತ್ರಿ, ಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯವರು, ಸ್ವಯಂ ಸೇವಕರು, ಪೋಷಕರು ಹಾಗೂ ಸಮುದಾಯದ ಎಲ್ಲಾ ಭಾಗೀದಾರ ಸಕ್ರಿಯ ತೊಡಗಿಸುವಿಕೆಯಂತಹ ಸದುದ್ದೇಶದ ಕಾರ್ಯಕ್ರಮವೇ ವಿದ್ಯಾಗಮ .
ವಿದ್ಯಾರ್ಥಿಗಳಿಗೆ ಅದೆಷ್ಟು ಉಪಕಾರ : ಉಳ್ಳವರಿಗೆ ಅದೆಷ್ಟೋ ಅವಕಾಶ ಲಭಿಸುತ್ತಿದೆ ಆದರೆ ಇಲ್ಲದವರ ಪಾಡು ಹೇಳತೀರದು ನಗರ ವಾಸಿಗಳಿಗೆ ಅಂತರ್ಜಾಲ ಶಿಕ್ಷಣ ಲಭಿಸುತ್ತದೆ ಕಂಪ್ಯೂಟರ್ ,ಮೊಬೈಲ್ ಬಳಕೆಗೆ ಆರ್ಥಿಕ ಸ್ಥಿತಿ ಹೊಂದಿಕೆ ಯಾಗುವುದರಿಂದ ಯಾವುದೇ ತೊಂದರೆ ಇರದು . ಇನ್ನೂ ಒಂದಷ್ಟು ಖರ್ಚು ಮಾಡಿ ಟೂಷನ್ ಕೊಡಲು ತರಬೇತಿದಾರರನ್ನು ಮನೆಗೆ ಕರೆಯಿಸಿ ಕೊಳ್ಳುವ ಪರಿಪಾಠ,ಅವಕಾಶ ಇದೆ . ಆದರೆ ಗ್ರಾಮೀಣ ಪರಿಸರದಲ್ಲಿನ ವಿದ್ಯಾರ್ಥಿಗಳ ಸ್ಥಿತಿ ಶೋಚನೀಯ. ಅಂತರ್ಜಾಲವಂತೂ ಇಲ್ಲ ಕಂಪ್ಯೂಟರ್ ,ಮೊಬೈಲ್ ಇಲ್ಲವೇ ಇಲ್ಲ . ಇನ್ನಿತರ ಸೌಲಭ್ಯ ದೂರದ ಮಾತು . ಒಂದು ಹೊತ್ತಿನ ತುತ್ತಿಗಾಗಿ ಕೂಲಿ ನಾಲಿ ಮಾಡಿ ಮುಂಜಾನೆ ಮನೆ ಬಿಟ್ಟರೆ ಮುಸ್ಸಂಜೆ ಮನೆ ಸೇರುವ ಪಾಲಕರ ಪೋಷಕರಿಗೆ ಭಯ ಆವರಿಸರುತ್ತೆ ಮಕ್ಕಳು ಏನು ಮಾಡ್ತಾವೋ ಹೇಗೆ ಇದ್ದವೂ ಎಂಬುದು. ಇರುವಲ್ಲಿ ಇರದ ವಯಸ್ಸಿನ ಸಹಜ ಗುಣಕ್ಕೆ ಕಡಿವಾಣ ಹಾಕಲು ಮನೆಯಲ್ಲಿ ಯಾರು ಇಲ್ಲ ಇತ್ತ ಶಾಲೆ ಇಲ್ಲಾ. ಈ ಎಲ್ಲ ಆತಂಕ ಪಾಲಕರಲ್ಲಿ ಇದ್ದೇ ಇರುತ್ತವೆ . ಈ ಯೋಜನೆ ಪ್ರಕಾರ ಒಂದಷ್ಟು ವಿದ್ಯಾರ್ಜನೆ ಜೊತೆಗೆ ಸುರಕ್ಷತೆಯೂ ಕಾಪಾಡುತ್ತವೆ. ವಿದ್ಯಾಗಮ ಯೋಜನೆಯ ಉದ್ದೇಶವೇ ಹೀಗಿದೆ ಗ್ರಾಮ, ನಗರ, ಪಟ್ಟಣ, ಗುಡ್ಡಗಾಡು, ಹಳ್ಳಿಗಾಡು ಪ್ರದೇಶ, ಬೆಟ್ಟ, ಅರಣ್ಯದಂಚಿನ ಗ್ರಾಮಗಳ ಮಕ್ಕಳಿಗೆ ಟಿವಿ, ಮೊಬೈಲ್ ಸೌಲಭ್ಯವೂ ಕಷ್ಟ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಅದರಲ್ಲೂ, ಗ್ರಾಮೀಣ ಮಕ್ಕಳಿಗೆ ಅತೀ ಮುಖ್ಯವಾದ ಯೋಜನೆ . ಎಲ್ಲೆಡೆ, ಎಲ್ಲರಿಗೂ ಶಿಕ್ಷಣ ಬೇಕೆಂಬ ನೀತಿಗೆ ಇದು ಉತ್ತಮ ವಾಗಿದೆ . ಕರೋನ ಕಾಲದಲ್ಲಿ 10 ನೇ ತರಗತಿ ಪರೀಕ್ಷೆ ನೆಡೆಸಿ ದೇಶಕ್ಕೆ ಮಾದರಿಯಾದ ನಮ್ಮ ರಾಜ್ಯಕ್ಕೆ ಇದೊಂದು ಸಾಹಸ ಗಾಥೆಯ ಗರಿಯೂ ಹೌದು. 150ಕ್ಕೂ ಅಧಿಕ ಶಿಕ್ಷಕರು ಕೋವಿಡ್ ಗೆ ತುತ್ತಾಗಿ ಪ್ರಾಣ ತ್ಯಾಗ ಮಾಡಿದ್ದರೆಂಬ ಮಾಧ್ಯಮ ಸಮೀಕ್ಷೆಯಲ್ಲಿ ಎಷ್ಟು ಹುರುಳಿದೆಯೋ ಗೊತ್ತಿಲ್ಲ ,ಆದರೆ ಕರೋನ ಕಾಲ ಘಟ್ಟದಲ್ಲಿ ಇಡೀ ಜಗತ್ತೇ ಸಂಕಷ್ಟ ಎದುರಿಸುತ್ತಿದೆ ಇದೀಗ ಅದೇ ದೈನಂದಿನ ಜೀವನಕ್ಕೆ ಒಗ್ಗಿ ಕೊಳ್ಳಲೇ ಬೇಕಾಗಿದೆ . ಸಿನಿಮಾ ,ಶಾಲೆ ಬಿಟ್ಟರೆ ಮತ್ತೆಲ್ಲಾ ಸಾಮನ್ಯ ಪರಿಸ್ಥಿತಿಗೆ ಬಂದಿದೆ . ಹಾಗಂತ ಸುರಕ್ಷತೆಯನ್ನು ಮೈ ಗೂಡಿಸದೇ ಇರುವುದು ಸರಿಯಲ್ಲ ಅವಶ್ಯಕ ಸುರಕ್ಷತೆ ಬೇಕು. ಆ ಸುರಕ್ಷತೆಯನ್ನು ಪಾಲಿಸಿದರೇ ವಿದ್ಯಾಗಮ ಯೋಜನೆ ಸಕ್ಸಸ್ ಕಾಣುವುದರಲ್ಲಿ ಎರಡು ಮಾತಿಲ್ಲ. ಮಕ್ಕಳ ಕಲಿಕೆ ನಿರಂತರ ಆಗಿರುವಂತೆ ನೋಡಿಕೊಳ್ಳುವುದಕ್ಕಾಗಿ ಎಂ.ಕೆ. ಶ್ರೀಧರ್ ನೇತೃತ್ವದ ಸಮಿತಿ ವರದಿ ಆಧಾರದಲ್ಲಿ ವಿದ್ಯಾಗಮ ಯೋಜನೆ ಅನುಷ್ಠಾನ ಬಂದ ರಾಜ್ಯಾದ್ಯಂತ ಒಟ್ಟು ಸರಿ ಸುಮಾರು ಐವತ್ತು ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳು ‘ವಿದ್ಯಾಗಮ’ದ ಪ್ರಯೋಜನವನ್ನು ಪಡೆಯುವಂತಾಗಿದ್ದು ಸಂತೋಷದ ವಿಚಾರ .ಶಿಕ್ಷಕ ವೃತ್ತಿ ಎಂದರೆ ಅದು ಸಾಮಾಜಿಕ ಸೇವೆಯೂ ಹೌದು , ಜವಾಬ್ದಾರಿಯೂ ಹೌದು. ಸಮರ್ಥವಾಗಿ ಸುರಕ್ಷತೆ ಯೊಂದಿಗೆ ನಿರ್ವಹಿಸಿದರೇ ಸಾವು -ನೋವುಗಳಿಲ್ಲದೇ ಯೋಜನೆ ಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳ ಭವ್ಯ ಭಾವಿಷ್ಯಕ್ಕೇ ಮುನ್ನುಡಿ ಬರೆಯಬೇಕು ಸುರಕ್ಷತೆ ಹೇಗಿದ್ದರೆ ಚೆನ್ನಾ :ವಿದ್ಯಾಗಮಕ್ಕೆ ತೆರಳುವ ಶಿಕ್ಷಕರಿಗೆ/ವಿದ್ಯಾರ್ಥಿಗಳಿಗೆ ಆಗಾಗ ಉಚಿತ ಕೊರೊನಾ ತಪಾಸಣೆ ಸೌಲಭ್ಯ ಜೊತೆಗೆ ವೈದ್ಯಕೀಯ ವ್ಯವಸ್ಥೆ ಜಾರಿಯಾಗಬೇಕು . ಸಮುದಾಯ ಭವನ ಅಥವಾ ವಿದ್ಯಾರ್ಥಿಗಳ ಸಾಮಾಜಿಕ ಅಂತರ ಕಾಪಾಡುವಲ್ಲಿ ಸೂಕ್ತ ವೇದಿಕೆ,ವಿಶಾಲ ಸ್ಥಳ ಕಲ್ಪಿಸಬೇಕು,ಶುಚಿತ್ವ ಕಡೆ ಗಮನ ವಹಿಸಿ , ಶಿಕ್ಷಕರಿಗೆ, ಪೋಷಕರಿಗೆ ಧೈರ್ಯ ತುಂಬುವಂತ ಕೆಲಸವಾಗಬೇಕು .ಆಯಾಯ ಗ್ರಾಮದವರು ತುಂಬು ಹೃದಯ ದಿಂದ ಪ್ರೋತ್ಸಾಹಿಸಬೇಕು. ಇಂತಹ ಸಣ್ಣ ಪುಟ್ಟ ಮಾರ್ಪಾಡು ಅವಶ್ಯಕತೆ ಬಿಟ್ಟರೇ, ಧೈರ್ಯ ಒಂದೇ ಸಾಧನ .

ಬುಧವಾರ, ಅಕ್ಟೋಬರ್ 7, 2020

ಅನುಶ್ರೀಯೂ.. ಡ್ರಗ್ಸೂ..!

ಸ್ಟಾರ್ ನಿರೂಪಕಿ ಅನುಶ್ರೀ ಹೆಸರು ಡ್ರಗ್ಸ್ ಜಾಲದಲ್ಲಿ ತಳಕು ಹಾಕಿ ಕೊಂಡಿದ್ದರ ವಿಚಾರ ಈಗ ಭಯಂಕರ ಸುದ್ದಿಯಾಗಿ ಹರಡಲಾರಂಭಿಸಿದೆ. ಮಾದಕ ಜಾಲಕ್ಕೆ ಸಂಬಂಧ ಪಟ್ಟಂತೆ ಕೊರಿಯೋ ಗ್ರಾಫರ್ ಕಿಶೋರ್ ನನ್ನ ಬಂಧಿಸಲಾಗಿತ್ತು. ಬಂಧನದ ಬಳಿಕ ಕಿಶೋರ್ ಬಯಲು ಪಡಿಸಿದ್ದ .,ನಮ್ಮ ಪಾರ್ಟಿಯಲ್ಲಿ ಅನುಶ್ರೀ ಪಾಲ್ಗೊಳ್ಳುತ್ತಿದ್ದಳು ಹಾಗೂ ಡ್ರಗ್ಸ್ ಸೇವಿಸುತ್ತಿದ್ದಳು ಎಂದು. ,ವಿಷಯ ತಿಳಿದ ಸಿಸಿಬಿ ಪೊಲೀಸರು ಅನುಶ್ರೀ ಗೆ ನೋಟಿಸ್ ನೀಡಿತ್ತು . ಅಂತೆಯೇ ಮಂಗಳೂರಿನ ಸಿಸಿಬಿ ತಂಡ ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಬಿಡುಗಡೆ ಮಾಡಿತ್ತು ನಂತರ ನಡೆದಿದ್ದು ಸುದ್ದಿಯೋ ಸುದ್ದಿ ಸಾಕಷ್ಟು ಮಂದಿ ಅವಳು ಒಳ್ಳೆ ಹುಡುಗಿ ಅವಳು ಡ್ರಗ್ಸ್ ಜಾಲದಲ್ಲಿ ಇಲ್ಲ ಎಂಬ ಧ್ವನಿ ಮೊಳಗಿಸುತ್ತಿದ್ದರೇ, ಇತ್ತಾ ಇದಕ್ಕೆ ವಿರುದ್ಧವಾದ ಅಪವಾದ ಕೇಳಿ ಬರುತ್ತಿವೆ .ಅದೂ ಇದೂ ಎಂದು ರೆಕ್ಕೆ ಪುಕ್ಕ ಕಟ್ಟಿಕೊಂಡು ಸುದ್ದಿ ಹಾರಾಡುತ್ತಿವೆ. ಅನುಶ್ರೀ ಸ್ವಷ್ಟಿಕರಣಕ್ಕಾಗಿ ಮಾಧ್ಯಮಗಳ ಮುಂದೆ ಬಂದಿದ್ದೂ ಆಯ್ತು , fbಯಲ್ಲಿ ಬಂದಿದ್ದೂ ಆಯಿತು. fb ಯಲ್ಲಿ ಲೈವ್ ಬಂದೂ ಅತ್ತು ,ಗೊಗೇರದು ಹೇಳಿದ್ದೂ ಆಯ್ತು "೧೨ ವರ್ಷಗಳ ಹಿಂದೆ ಕಿಶೋರ್ ನಂಗೆ ಡಾನ್ಸ್ ಮಾಷ್ಟ್ರ್ ಆಗಿದ್ದರು ಆಗ ನಾನು ವಿನ್ ಕೂಡಾ ಆಗಿದ್ದೆ ಅದೇ ಈಗ ನನಗೆ ಮುಳುವಾಗಿದೆ ಅದೇ ಸಂಕಷ್ಟ ತಂದು ಕೊಡುತ್ತದೆ ಎಂದು ನಾನು ಎಣಿಸಿರಲಿಲ್ಲ . ನಾನು ಅಮ್ಮ ಮತ್ತು ತಮ್ಮನ ಜೊತೆ ಸುಂದರವಾಗಿ ಜೀವನ ನಡೆಸುತ್ತಿದ್ದೇನೆ ,ಸುಖವಾಗಿ ಕಾಲ ಕಳೆಯುತ್ತಿದ್ದೇನೆ ಯಾವುದೇ ಪಾರ್ಟಿಗೆ ನಾನು ಹೋಗುವುದಿಲ್ಲ . ೧೨ ವರ್ಷದ ಹಿಂದೆ ಪರಿಚಯ ಹಾಗೂ ಕಳೆದ ಕೆಲವು ವರ್ಷಗಳ ಹಿಂದೆ ಆತನ ಡಾನ್ಸ್ ಕ್ಲಾಸ್ ಉದ್ಘಾಟನೆಗೆ ನಾನು ತೆರಳಿದ್ದೆ ಅಷ್ಟೇ. ಈಗ ಏನೂ ಕಾಂಡೆಕ್ಟ್ ಇಲ್ಲ ಎಂದಿದ್ದರು.
ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ ? ಎಂಬ ಪ್ರಶ್ನೆ ಸಾಮಾನ್ಯ ನಾಗರೀಕರಲ್ಲೂ ಅನುಮಾನ ಹುಟ್ಟಿಸುತ್ತಿದೆ ಸುಖಾ -ಸಮ್ಮನೆ ಆತ ಪೋಲೀಸರ ಮುಂದೆ ಅನುಶ್ರೀ ಹೆಸರು ಹೇಳುವುದಕ್ಕೆ ಸಾಧ್ಯವಿಲ್ಲ . ಎಲ್ಲೂ ಇದರಲ್ಲಿ ಅನುಶ್ರೀ ಇರಬಹುದೆಂಬ ಗುಮಾನಿ ಕಂಡು ಬರುತ್ತದೆ ಇದರ ಮಧ್ಯೆ ಸಿಸಿಬಿ ಯಿಂದ ಇನ್ನೊಂದು ಬಾಂಬ್ ಹೊರಬಿತ್ತು . ಮಂಗಳೂರಿನ ಸಿಸಿಬಿ ಕಚೇರಿಗೆ ವಿಚಾರಣೆಗೆ ತೆರಳುವುದಕ್ಕಿಂತ ಮೊದಲು ,ಅನುಶ್ರೀ ತನ್ನ ಮೊಬೈಲ್ ನಿಂದ ಹಲವಾರು ದೊಡ್ಡ -ದೊಡ್ಡ ರಾಜಕಾರಣಿಗಳಿಗೂ ಸೇರಿದಂತೆ ಉದ್ಯಮಿಗಳಲ್ಲಿ ಒತ್ತಡ ಹೇರಿದ್ದರಂತೆ ನನ್ನನ್ನು ಬಂಧಿಸಿದಂತೆ ನೋಡಿಕೊಳ್ಳಿ ಎಂದು ಅಲವತ್ತು ಕೊಂಡಿದ್ದರಂತೆ ಅವರ ಅಪ್ಪಣೆ ಮೇರೆಗೆ ಪೊಲೀಸರು ಕೇವಲ ವಿಚಾರಣೆಯನ್ನು ನೆಡೆಸಿ ಕಳುಹಿಸಿದ್ದರೆಂಬುದು ಸುದ್ದಿ . ಇನ್ನು ಸಿಸಿಬಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನುಶ್ರೀಯನ್ನು ವಿಚಾರಣೆ ಮಾಡಿದ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ . ಇದೆಲ್ಲವನ್ನೂ ಕಂಡರೇ ಅನುಶ್ರೀ ತಪ್ಪು ಮಾಡಿರಬಹುದೇ ಅನುಮಾನಕ್ಕೆ ಕಾರಣವಾಗಿದೆ. ತಪ್ಪು ಮಾಡಿಲ್ಲವೆಂದ ಮೇಲೆ ವಿಚಾರಣೆಗೆ ಒಳಪಡುವ ಮುನ್ನಾ ದಿನ ರಾಜಕಾರಣಿಗೆ ಕಾಲ್ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ. ಏನೇ ಇರಲಿ ಇದೀಗ ಬಂದ ಇನ್ನೊಂದು ಸುದ್ದಿಯ ಪ್ರಕಾರ ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ಪ್ರೀ ಹ್ಯಾಂಡ್ ಕೊಟ್ಟಿದ್ದಾರಂತೆ. ಇನ್ನೊಮ್ಮೆ ವಿಚಾರಣೆ ನಡೆಯುತ್ತಾ ? ಅನುಶ್ರೀ ಅರೆಸ್ಟ್ ಆಗ್ತಾರಾ ? ಕಾಲವೇ ಉತ್ತರ ಹೇಳಬೇಕು . ಕಷ್ಟ ದಿಂದ ಮೇಲೆ ಬಂದು ಯಾವುದೇ ಗಾಡ್ ಫಾದರ್ ಇಲ್ಲದೇ ಸೆಲೆಬ್ರಿಟಿ ಆಗಿದ್ದ ಅನುಶ್ರೀ ಕಹಾನಿಗೆ ಅಧಿಕ ಬೆಲೆ ಬರುತ್ತದೆ ಅದಿಲ್ಲವೆಂದರೆ ಇಷ್ಟು ದಿನ ಸಂಪಾದಿಸಿದ ಇಮೇಜ್ ನೀರಲ್ಲಿ ಕೊಚ್ಚಿ ಹೋಗುತ್ತದೆ ಅಷ್ಟೇ !!