ಬುಧವಾರ, ನವೆಂಬರ್ 13, 2013

ಅನ್ನಭಾಗ್ಯ ಯೋಜನೆ ಫಲಾನುಭಾವಿಗಳು ಯಾರು ?


 ಈ ಹಿಂದೆ ಮೂರು ರೂ .. ಆರು ರೂ.. ಗೆ ದೊರಕುತ್ತಿದ್ದ ಅಕ್ಕಿ, ಕೆಲವಂದು ನ್ಯಾಯ ಬೆಲೆ ಅಂಗಡಿಯಲ್ಲಿನ ಅನ್ಯಾಯದ ಕೂಪದಲ್ಲಿ,ಬಡವರ ಸ್ವತ್ತು ಅಂತವರಿಗೆ ದೊರೆಯದೇ ಗುಳುಂ -ಗುಳುಂ  ಸ್ವಾಹಾ ತಂತ್ರಜ್ನರ ಪಾಲಾಗುತ್ತಿರುವ ವಾಸ್ತವ ಸ್ಥಿತಿಯಲ್ಲಿ ಈ ಯೋಜನೆ ಅಂತವರಿಗೆ ರೊಟ್ಟಿ ಜಾರಿ ತುಪ್ಪ ಕ್ಕೆಬಿದ್ದ ಹಾಗೆ ಆಗಿದೆ .  ಒಂದು ಗ್ರಾಮದಲ್ಲಿ  ಎಷ್ಟು ಪಡಿತರರು ಇದ್ದಾರೆ ಎಂಬ  ಪಟ್ಟಿ  ಇದ್ದೂ , ಅಷ್ಟೇ ಪ್ರಮಾಣದ ಮಾಲ್  ಗೊಡನ್ನಿಗೆ  ಬಂದು ಬಿದ್ದರೂ , ಬೇಗ  ಬಂದ ಒಂದಿಷ್ಟು ಫಲಾನುಭವಿಗಳಿಗೆ ಹಂಚಿ ''ನಮಗೆ ಬಂದಿದ್ದು ಇಷ್ಟೇ'' ಎಂದು ಅದೇ ರಾಗ ಅದೇ ಹಾಡು ನಂತೆ ಅನೂ ದಿನವೂ ತಮ್ಮ ಭಾವನೆಯನ್ನು ಹೊರ ಹಾಕಿ ಕೈ ತೊಳೆದು ಕೊಳ್ಳುತ್ತಾ ,ಏನೂ ಅರಿಯದ  ಗ್ರಾಮೀಣ ಪ್ರದೇಶ ಮುಗ್ದ ಜೀವಿಗಳ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ಕಣ್ಣಿನಲ್ಲಿ ರಕ್ತ ಇಲ್ಲದ  ಕಟುಕರಿಗೆ ಏನ್ ಹೇಳೋಣ ???