ವರ್ಷಗಳ ನಂತರ ಉಜರೆ ಸೌಜನ್ಯ ಪ್ರಕರಣ ಜೀವ ಪಡೆದು ಉತ್ಪ್ರೆಕ್ಶಾ ನಾಗಾಲೋಟದಲ್ಲಿ ಸಂಚರಿಸುತ್ತಿದೆ.ವಿಧ್ಯಾರ್ಥಿ ನಿ ಸೌಜನ್ಯಳ ಅತ್ಯಾಚಾರ ಕೊಲೆಗೆ ಸಂಬಂಧಪಟ್ಟಂತೆ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಂಬಂದಿಕರೇ ಪ್ರಮುಖ ಕಾರಣ ಎಂದು ಬೊಟ್ಟು ಮಾಡಿ ತೋರಿಸಲಾಗುತ್ತಿದೆ . ಕೆಲವು ವ್ಯಕ್ತಿಗಳು ಮುಂಚುಣಿಗೆ ಬಂದು ಹೋರಾಟಕ್ಕೆ ಇಳಿದು ಸೌಜನ್ಯಳ ವಿಷಯಗಳನ್ನು ಎತ್ತಿ ಇನ್ನೀತರ ವಿಚಾರ ವೈಚಾರಿಕತೆಯ ವಿರುದ್ಧ ಧ್ವನಿಯಾಗಿಸುತ್ತಾ ಆರೋಪದ ಮಳೆಯನ್ನು ಹರಿಸುತ್ತಿರುವುದನ್ನು ನೋಡುತ್ತಿದ್ದರೆ 'ಇಲ್ಲ' ಇನ್ನುವ ಮನೋಭಾವ ಸಾರಿಸಾರಿ ಮನದಲ್ಲಿ ನುಡಿಯುವುತ್ತಿದ್ದರೂ, ಎಲ್ಲೂ ಒಂದು ಕಡೆ ಬೆಂಕಿ ಇಲ್ಲದೇ ಹೊಗೆಯಾಡದು ಎಂಬ ವಿಚಾರ ಪದೇ ಪದೇ ತಟ್ಟದೇ ಇರಲಾರದು
.ಇದು ಕೇವಲ ಸೌಜನ್ಯಳ ಪ್ರಕರಣ ವನ್ನು ನ್ಯಾಯದ ಬಾಗಿಲಿಗೆ ತರುವ ಪ್ರಯತ್ನವಾಗಿರದೇ ಈ ಹಿಂದೆ ಅಲ್ಲಿ ನಡೆದು ಭೂಗತ ಗೊಂಡ ಕೊಲೆ , ಸುಲುಗೆ , ಅತ್ಯಾಚಾರ, ಕಾಣೆ ಮುಂತಾದ ಹತ್ತು ಹಲವು ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯ ವಾಗುವುತ್ತಿದೆ ಎಂದು ಮೆಲ್ನೊಟಕ್ಕೆ ಈ ಹೋರಾಟ, ಸಭೆ - ಪ್ರತಿಭಟನೆಗಳಿಂದ ಸಾರಿ ಹೇಳುತ್ತಿದೆ. ನಿಜಕ್ಕೂ ಇದು ಸೌಗತಾರ್ಹವೂ ಕೂಡಾ ಹೌದು. ಡೆಲ್ಲಿಯ ಗ್ಯಾಂಗ್ ರೆಪ್ , ಹಾಗೂ ಮಣಿಪಾಲದ ಅತ್ಯಾಚಾರ ಪ್ರಕರಣದ ಆರೊಪಿಗಳನ್ನು ಬಂಧಿಸಲಾಗಿದೆ. ಆದರೆ ಸೌಜನ್ಯಳ ವಿಷಯಕ್ಕೆ ಮೀನಾಮೇಷ ಯಾಕೆ.. ಈ ಹಿಂದೆ ತಾಲ್ಲೊಕಿನಲ್ಲಿ ನಡೆದ ಅದೇಷ್ಟೋ ಘಟನೆಗಳ ವಿಚಾರಣೆ ಮೂಲೆ ಸೇರಿರುವುದರ ಗುಟ್ಟೇನು ? ಪೋಲಿಸ್ ಇಲಾಖೆಗೂ ಸೇರಿದಂತೆ ಅಕ್ಕ-ಪಕ್ಕದಲ್ಲಿರುವವರಿಗೂ ಅಲ್ಲಿ ಎನು ನಡೆಯುತ್ತಿದೆ ..? ಯಾರ ಕೈವಾಡವಿದೆ . ಎಂಬುದು ಗೊತ್ತಿದ್ದರೂ ಯಾಕೆ ಇದು ಮುಖ್ಯವಾಹಿನಿಗೆ ಬರುತ್ತಿಲ್ಲ. ಇಂಥಹ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಎಲ್ಲೆಡೆ ಪಸರಿಸಲು ಬೇಕಾಗಿದ್ದು... ಇಷ್ಟೊಂದು ಧೀರ್ಘ ಸಮಯ. ಮೊನ್ನೆ -ಮೊನ್ನೆಯಿಂದ ಮಾಧ್ಯಮಗಳ ಮೂಲಕ ಇಂಚು ಇಂಚಾಗಿ ಹರಿದು ಬಂದ ವಿಚಾರ ನಿಜಕ್ಕೂ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದೆ. ಇದನ್ನೇಲ್ಲಾ ಗಮನಿಸುತ್ತಿದ್ದರೆ, ಈ ಎಲ್ಲಾ ಪ್ರಕರಣದ ಹಿಂದೆ ಬಲಾಡ್ಯರ ಬಲ ಪ್ರಯೋಗದ ಪ್ರಭಾವ ಇಲ್ಲದೇ ಇರಲಾರದು. ಎನೇ ಇರಲಿ ಯಾವುದೇ ಬೆದರಿಕೆ ,ಒತ್ತಡಕ್ಕೆ ಮಣಿಯದೇ ಜೀವದ ಹಂಗು ತೋರೆದು ಹೋರಾಟಕ್ಕೆ ನಿಂತ ತಿಮ್ಮರೋಡಿ ಮಹೇಶ ಶೆಟ್ಟಿ ಸೇರಿದಂತೆ ಮತ್ತಿತ್ತರರ ಧೈರ್ಯ, ಸ್ಥೈರ್ಯವನ್ನು ಮೆಚ್ಚತಕ್ಕದ್ದೇ. ಒಟ್ಟಾರೆ ಘಟನೆಗೆ ಸಂಬಂದಿಸಿದಂತೆ ಇಲ್ಲಿ ಯವುದು ಸತ್ಯ- ಯಾವುದು ಮಿಥ್ಯ ಎಂಬುದು ಪ್ರಮುಖವಾಗಿ ಕಾಡುತ್ತಿದೆ. ನಿಸ್ಪಾಕ್ಶಪಾತ ತನಿಖೆಯಾದರೆ .ಉತ್ತರ ಸಿಗಬಹುದು ಪಾರದರ್ಶಕ ತನಿಖೆ ಸಾಧ್ಯವೇ.. ???
