ಬಹು ಚರ್ಚೆಯಲ್ಲಿರುವ ಹಾಗೂ ಕರಾವಳಿಯ ನಾಡಿ -ಮಿಡಿತವನ್ನು ಎಚ್ಚರಿಸುತ್ತಿರುವ ವಿಚಾರ ಇದಾಗಿದೆ . ಹೌದು !ಮಂಗಳೂರು ಸಮೀಪದ ನಿಡ್ಡೊಡಿ ಎಂಬಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ಆಗಲಿದೆ .ಇದರ ನೀಲನಕ್ಷೆ ಈಗಾಗಲೇ ತಯಾರು ಗೊಂಡಿದ್ದೂ , ಕಾಮಗಾರಿ ಪ್ರಾರಂಭವಾಗಲು ಕ್ಷಣ ,ಗಣನೆಯಲ್ಲಿದೆ . ಅರಗಿಸಿ ಕೊಳ್ಳಲಾಗದ ಈ ವಿಚಾರ ವನ್ನು ತಿಳಿದು ಸುತ್ತ -ಮುತ್ತಲಿನ ಸ್ಥಳಿಯರು ಕಿಡಿ ಕಾರುತ್ತಿದ್ದಾರೆ . ತಮ್ಮ ಎಕರೆ ಗಟ್ಟಲೇ ಕ್ರಷಿ ಭೂಮಿ ,ಹಚ್ಚ ಹಸುರಿನ ಸ್ವಚ್ಛ ಪರಿಸರ ನಾಶ ವಾಗುವುದರ ಜೊತೆಗೆ ಶಾಶ್ವತ ವಾಗಿ ಪ್ರದೇಶ ನಿಶ್ಯಬ್ದ ವಾಗುವ ಲಕ್ಷಣ ವನ್ನು ಮುಂದಾಗಿ ಆಲೋಚಿಸಿ ಎಲ್ಲಡೆ ಪ್ರಜ್ಞಾವಂತರ ರೋಷ-ಆವೇಶದ ಕಟ್ಟೆ ಒಡೆದಿದೆ . ಇತ್ತೀಚಿಗೆ ಸಮೀಕ್ಷೆ ಆಗಮಿಸಿದ ಉನ್ನತ ಅಧಿಕಾರಿಗಳನ್ನು ಚಪ್ಪಲಿ ಹಿಡಿಸೋಡಿಯೊಂದಿಗೆ ಸ್ವಾಗತಿಸಿ ತರಾಟೆಗೆ ತೆಗೆದು ಕೊಂಡ ನಾಗರಿಕರು, ಹೋರಾಟದ ಕಿಚ್ಚನ್ನು ದಿನೇ ದಿನೇ ವಿಸ್ತರಿಸುತ್ತಿದ್ದಾರೆ . ಇದು ಸ್ವಾಗತವೂ ಕೂಡಾ ಹೌದು . ಆದರೆ
ನಿಡ್ಡೊಡಿ
ಯಲ್ಲಿ ಉಷ್ಣ ವಿಧ್ಯುತ್ ಸ್ಥಾವರ ರೆಡಿ ಆಗುತ್ತಾ ?! :
ಖಂಡಿತವಾಗಿಯೂ ಇದು ಇಂದಲ್ಲ ನಾಳೆ ಯಾದರೂ ಇದಕ್ಕೆ ಹಸಿರು
ನಿಶಾನೆ ದೊರಕದೇ ಇರಲಾರದು . ಎಂಬ ಮಾತು ಪ್ರಚಲಿತದಲ್ಲಿದೆ ಕಾರಣ ಇಷ್ಟೇ. ಕೇಂದ್ರ ಸರಕಾರದ
ಕ್ರಪಾ ಪೋಷಿತ ಯೋಜನೆ ಇದಾಗಿರುವುದರಿಂದ ಜೊತೆಗೆ ಕರ್ನಾಟಕದಲ್ಲೂ ಪ್ರಸ್ತುತ ಕಾಂಗ್ರೆಸ್ ಸರ್ಕಾರ
ಆಡಳಿತ ನಡೆಸುತ್ತಿರ್ವುದರ ಜೊತೆಗೆ ಕರಾವಳಿಯಲ್ಲಿ ಮಂತ್ರಿ ಗಿರಿಗಳ ಪಾಲು ಬಹು ದೊಡ್ಡದಿದೆ .
ಒಂದೆಡೆ ತಮ್ಮನ್ನು ಆರಸಿ, ಹಾರೈಸಿ ವಿಧಾನ ಸೌಧಕ್ಕೆ ಪ್ರವೇಶ ಕಲ್ಪಿಸಿದ ಮತದಾರ ಪ್ರಭುಗಳನ್ನೂ ಬಿಡುವಂತಿಲ್ಲ
ಇನ್ನೊಂದೆಡೆ ಆಸನದ ಪದವಿಯನ್ನು ದಯಪಾಲಿಸಿದ ಸರಕಾರದ ತೀರ್ಪನ್ನು ತಿದ್ದುವಂತಿಲ್ಲದ ತ್ರಿಶಂಕು
ಪರಿಸ್ಥಿತಿಯಲ್ಲಿ ಮಂತ್ರಿ ಮಹೋದಯರು ಕೊನೆಗೆ ತುಳಿಯುವ ಹಾದಿ ಸರ್ಕಾರದ ಮೆಟ್ಟಿಲನ್ನೇ . ಮತದಾರ ಹಂಗು
ಈಗಿಲ್ಲ ಕಾರಣ ಪದವಿ ಗಟ್ಟಿಯಾಗಿದೆ ೫ ವರ್ಷ ತೊಂದರೆ ಇಲ್ಲ ಮತದಾರರ ಎದುರು ಮೊಸಳೆ ಕಣ್ಣೀರಿಡುತ್ತಾ
ಇತ್ತ ತಮ್ಮ ಬೇಳೆ ಬೇಯಿಸಿ ಕೊಳ್ಳುವವರನ್ನು ನಾವು ಕಾಣ ಬಹುದು ಇದಕ್ಕೆ ತಾಜಾ ಉದಾಹರಣೆಯ೦ದರೆ
ಯುಪಿಸಿಎಲ್. ಪಡುಬಿದ್ರೆ ಸಮೀಪ ನಿರ್ಮಾಣ ಗೊಂಡ ನಾಗಾರ್ಜುನ ಉಷ್ಣ ವಿಧ್ಯುತ್
ಸ್ಥಾವರ ವೇ ಸಾಕ್ಷಿ ನುಡಿಯುತ್ತಿದೆ . ಮೂರು ವರ್ಷಗಳ ಹಿಂದೆ ಇದೇ ತರಹನಾದ ಹೋರಾಟ ಚಳುವಳಿ ನಡೆದಿದ್ದು
!!ನಂತರ ವಾಸ್ತವದ ವಿಚಾರವನ್ನು ಪರಸ್ತುತ ಪಡಿಸುವ ಅಗತ್ಯವೇ ಇಲ್ಲ. ಅದೇ ದಿಕ್ಕಿನಲ್ಲಿ ಇದು ಸಾಗ
ಬಹುದೇ ಗೊತ್ತಿಲ್ಲಾ ಕಾಲವೇ ಉತ್ತರ ಹೇಳಬೇಕು
.
ನಿಡ್ಡೊಡಿ
ನಾಗರ್ಜುನ ಕ್ಕಿಂತ ಮೂರು ಪಟ್ಟು ದೊಡ್ಡದು !;
ಆಸಲಿಗೆ ಯೋಜಿಸಲ್ಪಟ್ಟ ನಿಡ್ಡೊಡಿ ಉಷ್ಣ ವಿಧ್ಯುತ್ ಸ್ಥಾವರ
ಯುಪಿಸಿಯೇಲ್ ಕ್ಕಿಂತ ಮೂರು ಪಟ್ಟು ದೊಡ್ಡದು . ಇದರಿಂದ ಹೊರಬರುವ ಹೋಗೆ , ರಾಸಾಯನಿಕ ಕಲ್ಮಶ ಸೇರಿದಂತೆ
ಪರಿಸರ ಮಾರಕಕ್ಕೆ ಪೂರಕವಾದ ಅಂಶಗಳು ಸಹಾ ಸಾಕಷ್ಟು ಬಿನ್ನವಾಗಿದೆ. ನಾಗಾರ್ಜುನ ಸಾಗರ ಕೇವಲ ಒಂದು
ಗ್ರಾಮಕ್ಕೆ ಕುಂದು ತರುವಂತಿದ್ದರೆ ಇದು ಮೂರು ಗ್ರಾಮಕ್ಕೆ ಕಂಟಕ ಪ್ರಾಯವಾಗಲಿದೆ . ಅದೂ ಅಲ್ಲದೇ ಇದು
ಬಹಳ ಎತ್ತರದ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವದರಿಂದ ಇದರ ಬಿಸಿ ಇನ್ನಷ್ಟು ವಿಸ್ತಾರ ಕಾಣುತ್ತದೆ
ಎಂಬದು ತಜ್ಞರ ಅಭಿಪ್ರಾಯ . ಇಷ್ಟೆಲ್ಲಾ ಉಪದ್ರವಕಾರಿತನವನ್ನು ಹೊಂದಿರಿರುವ ಉಷ್ಣ ವಿಧ್ಯುತ್ ಸ್ಥಾವರದ
ಸ್ಥಾಪನೆ ಇಲ್ಲಿ ಅವಶ್ಯವಿದೆಯೇ ಎಂಬ ಪ್ರಶ್ನೆ ಕಾಡದೇ ಇರದು ಇದಕ್ಕೆ ಒಂದನ್ನು ಪಡಿಬೇಕಿದ್ದರೆ
ಇನ್ನೊಂದನ್ನು ಕಳೆದು ಕೊಳ್ಳ ಬೇಕು ಎಂಬ ಸಿದ್ದ ಉತ್ತರವಿರುವದು ಸರಿಯೇ ಆದರೂ ಇಲ್ಲಿಗದು
ಖಂಡಿತ ವಾಗಿಯೂ ಅನ್ವಯಿಸುದಿಲ್ಲ ಕರಾವಳಿ ಯಲ್ಲಿ ಈಗಾಗಲೇ ಹಲವಾರು ಜಲವಿದ್ಯುತ್ ಕೇಂದ್ರ ಹಾಗೂ ಉಷ್ಣ
ವಿದ್ಯುತ್ ಸ್ಥಾವರ ಇರುವದರಿಂದ ಕರಾವಳಿ ಪ್ರದೇಶಕ್ಕೆ ಖಂಡಿತವಾಗಿಯೂ ವಿದ್ಯುತ್ ಅಭಾವವಿಲ್ಲಾ . ಇದು
ಇನ್ನ್ಯಲ್ಲಿಗೋ ಬೇಕಾಗಿರ್ವುದರಿಂದ ಇಲ್ಲಿ ಸ್ಥಾವರವನ್ನು ನಿರ್ಮಿಸಲು ಮುಂದಾಗಿದ್ದಾರೆ . ಎಲ್ಲಿ
ವಿದ್ಯುತ್ ಅಗತ್ಯವೋ ಅಲ್ಲಿ ನಿರ್ಮಾಣ ಕಾಣಲಿ ಎಂಬುದು ನಿಡ್ಡೊಡಿ ಉಳಿವಿನ ಹೋರಾಟ ಗಾರರ ಬಲ ವಾದ ಕೂಗಾಗಿದೆ
. ನಿಜಕ್ಕೂ ಈ ಮಾತು ವಾಸ್ತವರ್ಹವೂ ಕೂಡ ಹೌದು . ನಿಡ್ಡೊಡಿ ಬಗ್ಗೆ ಯಾರೂ ನಿರ್ಲಕ್ಷೆ
ವಹಿಸ ಬಾರದು ನಿಡ್ಡೊಡಿ ಪರಿಸರ ಉಳಿಸಿಕೊಳ್ಳಬೇಕು ಪ್ರಯತ್ನ ಪಟ್ಟು ನಿದ್ದೋಡಿ ಯಲ್ಲಾಗುವ ಸ್ಥಾವರವನ್ನು
ಬೇರೆಡೆಯಲ್ಲಿ ನಿರ್ಮಿಸಲು ಒತ್ತಡ ತರುವಲ್ಲಿ ಸರ್ವರೂ ಒಗ್ಗೂಡ ಬೇಕಾಗಿದೆ .
