ಬಿಸಿನೆಸ್ ಗಳಲ್ಲಿ ಎಷ್ಟೆಲ್ಲಾ ವಿಧಗಳಿವೆಯೋ ಅರ್ಥವಾಗುತ್ತಿಲ್ಲ . ಅಗ್ಗದ ರೀತಿಯಲ್ಲಿ ಮೈ ಕೈ
ಪೆಟ್ಟಾಗದೇ ಕಷ್ಟ ಪಡದೇ ದುಡ್ಡು ಮಾಡುವ ಮಂದಿಯನ್ನು ನಾವು ಹಲವಾರು ಸಂಧರ್ಭ
ಗಳಲ್ಲಿ ಅರಿತಿದ್ದೇವೆ /ನೋಡ್ತಾತಾನೆ ಇದ್ದೇವೆ . ಕಣ್ಣಗೆ ಕಾಣದಂತೆ ಬೇಡಾ ಎಂದು,ಕಣ್ಣುಮುಚ್ಚಿ ಕುಳಿತರೂ ಸಹಾ ನಮ್ಮ ಕಣ್ಣಿಗೆ ರಾಚುತ್ತದೆ .. ಅವರವ -ಭಾವ -ಬಕುತಿಗೆ
ತಕ್ಕಂತೆ ಬಿಸಿನೆಸ್ ಮಾಡ್ತಾರೆ ಬಿಡಿ ಆದರೆ ಅದರಿಂದ ಸಮಾಜಕ್ಕೆ ಯಾವುದೇ ಕಪ್ಪು ಚುಕ್ಕೆ
ಬಾರದಿದ್ದರೆ ಸಾಕು .. ಇತ್ತಿಚಿಗೆ ಮಾತ್ರ ತತ್ವ ಗಳು ಸಿದ್ದಾಂತದ ತಳಹದಿ ಡಾಟಿ ವಿವಹರಿಸುತ್ತಿರ್ವುದನ್ನು
ನೋಡಿದರೆ ಮೂಗಿನ ಮೇಲೆ ಬೆರಳು ಇಟ್ಟು ಕೊಳ್ಳುವಂತ
ಸ್ತಿತಿ ಬಂದೊದಗಿದೆ (!)ಎಂಬ ವಿಚಾರ ಹಾಸ್ಯಾಸ್ಪದ ಅನ್ನಿಸಿದರೂ
ಮನೆಯಿಂದ ಹೊರಗೆ ಕಾಲಿಡಲೂ ಸಾಧ್ಯವಾಗದಂತ ಭಯಾನಕ ವಾತವಾರಣ ಸರ್ಷ್ಟಿ ಯಾಗುತ್ತಿರವುದು ವಾಸ್ತವಾರ್ಹ . ಹೌದು ಕಣ್ರೀ ಇದು ಬುದ್ದಿವಂತರ ,ಸಭ್ಯತೆಗೆ
,ಸಂಸ್ಕ್ರತಿಗೆ ಹೆಸರಾದ ಕರಾವಳಿ ನಾಡಿನಲ್ಲಿ ನಡೆಯಿಸುತ್ತಿರುವ ಕೆಲವು ಅತಿ ರಥ -ಮಹಾರಥರ
ಪ್ರಚಂಡ ದೂರಾಗಾಮಿ ಬುದ್ದಿವಂತಿಗೆ ಪ್ರತಿಫಲ ಕಾಯಕ ಅಂತ ಹೇಳಬಹುದೇನೋ.. ಹತ್ತು ಸಾರಿ ಕದ್ದ ಕಳ್ಳ
ಒಂದು ಸಾತಿಯಾದರೂ ಸಿಕ್ಕಿ ಬೀಳಲೇ ಬೇಕಂತೆ . ಇದರಲ್ಲಿ ಎರಡು ವಿಚಿತ್ರ ಬಿಜಿನೆಸ್ ಇಲ್ಲಿದೆ ನೋಡಿ
ಒಂದೇ ತಿಂಗಳಲ್ಲಿ ನಡೆದ ಎರಡು ಘಟನೆ ನಿಜಕ್ಕೂ ಮನ ತಲ್ಲಣಿಸುತ್ತಿದೆ .
ನೋಡಲು ಸುರದ್ರೂಪಿ
ಯುವಕ ಫೇಸ್ಬುಕ್ ನಲ್ಲಿ ಫೇಕ್ ಆಕೊಂಟ್ ಕ್ರಿಯೇಟ್
ಮಾಡಿ ಹೆಂಗಳೆಯರನ್ನು ಬುಟ್ಟಿಗೆ ಹಾಕಿ ಕೊಂಡು ಲವ್ ಎಂಬ ನಾಟಕದಲ್ಲಿ ಲಾಡ್ಜ್ ನಲ್ಲಿ ರೂಂ ಮಾಡಿ ಅವರ ಆಶ್ಲೀಲ ಚಿತ್ರಗಳನ್ನು
ಕ್ಲಿಕ್ಕಿಸಿ , ಬ್ಲಾಕ್ ಮೇಲ್ ಮಾಡಿ ಹಣ ಒಡವೆ ಗಳನ್ನು ಲಪಟಾಯಿಸುವುದು ಈತನ ಉದ್ಯೋಗ ಎಂದರೆ ಅದೇ ರೀ ಬಿಜಿನೆಸ್ ಆದರೆ ಇನ್ನೊಂದು ಇದಕ್ಕಿನಂತಲೂ ಭಿನ್ನ ,
ರಸ್ತೆಯಲ್ಲಿ ಕಾಣ ಸಿಗುವ ಯುವತಿಯರನ್ನು ಕಿಡ್ನಾಫ್ ಮಾಡಿ ಅವರನ್ನು
ಬಲವಂತವಾಗಿ ಲೈಂಗಿಕ ಕ್ರಿಯಗೆ ಒಳಪಡಿಸಿ ಅದನ್ನ ಸೆರೆಹಿಡಿದು ಬ್ಲಾಕ್ ಮಾಡಿ ದುಡ್ಡು ಮಾಡುವದರ
ಜೊತೆಗೆ ಅದರ ಬಿಕರಿ ಯಿಂದಲೂ ಕೈ ತುಂಬಾ ರೊಕ್ಕ ಮಾಡ್ತಾ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡಿಯುವುದು
ದೈನಂದಿನ ಕಾರ್ಯ . ಅಬ್ಬಾ !!! ಎಂಥಾ ವಿಪರ್ಯಾಸ ನೋಡಿ
ನಮ್ಮ ಸಮಾಜ ಎಷ್ಟು ಕುಲಗೆಟ್ಟು ಹೋಗಿದೆ ಅಂದರೆ ಈ ಎರಡು ಉದಾಹರಣೆ ಗಳೇ ಸಾಕು . ಏನೇ
ಇರಲಿ ಇವರು ಪ್ರಸ್ತುತ ಪೋಲಿಸ್ ಬಲೆಯಲ್ಲಿ ಅತಿಥಿ ಯಾಗಿದ್ದರೂ, 'ಕೊಳ್ಳೆ
ಹೊಡೆದ ಮೇಲೆ ಮೇಲೆ ಕೋಟೆ ಬಾಗಿಲು 'ಹಾಕಿ ಏನು ಪ್ರಯೋಜಾನ ? ಇನ್ನು
ಅದೆಷ್ಟೋ ಇಂಥಹ ವಿಚಿತ್ರಕಾರಿ ಬಿಸಿನೆಸ್ಸು ನಮ್ಮ ತೆರೆ ಮರೆಯಲ್ಲಿ ನಡೆಯುತ್ತಿದೆಯೋ ಗೊತ್ತಿಲ್ಲ
. ಪ್ರಸ್ತುತ ಬಂಧಿಸಲ್ಪಟ್ಟ ಆರೋಪಿಗಳು ಪೋಲಿಸ್
ಠಾಣೆಯಲ್ಲಿ ರಾಗಿ ಮುದ್ದೆ ತಿನ್ನುತ್ತಾ ಸುಖವಾಗಿದ್ದಾರೆ , ಇನ್ನಷ್ಟು ದಿನ ..ಮತ್ತೆ ಹೊರಗೆ ಬಂದು ಹಳೆ ಚಾಳಿ ಮುಂದುವರಿಸದೆ
ಇರಲಾರದು . ಏನೆ ಇರಲಿ ಯಾರನ್ನು ನಂಬುವ ಸ್ಥಿತಿ ಯಲ್ಲಿ ಆಧುನಿಕ ಜಮಾನ ಇಲ್ಲ ನಮ್ಮ ಸೇಪ್ಟಿ
/ಜಾಗ್ರತೆ ನಮ್ಮ ಜೊತೆಗೆ ಇದ್ದರೆ ಇಂತಹಾ ಬಿಸಿನೆಸ್ ಗೆ ಬ್ರೇಕ್ ಬೀಳಬಹುದು .




