ಶನಿವಾರ, ಜುಲೈ 28, 2012

ಹಾಲಾಡಿ ಶ್ರೀನಿವಾಸ ಶೆಟ್ಟರ ಅಚಲ ನಿರ್ಧಾರಕ್ಕೆ ಹೆಂಡ್ಸಪ್ಹ್...


.
ಈ ಒಂದು ವಾಕ್ಯ ನನ್ನ ಒಡಲದ್ವನಿ ಇಂದ ಯಾಕೆ ಹೊರ ಹೊಮ್ಮಿತು ಎಂದರೆ ,ಖಂಡಿತವಾಗಿಯೂ ಇಂಥಹ ರಾಜಕಾರಣಿಗಳು ನಮ್ಮ ರಾಜಕೀಯದಲ್ಲಿ ಇದ್ದರಲ್ಲ ಎಂಬ  ಆಸೆ ಇಂದ.ಈ ಒಂದು ಸತ್ವ -ತತ್ವದ ಹಾದಿ ಇಂದ ಶ್ರೀನಿವಾಸ ಶೆಟ್ಟರು ಕೇವಲ ಅವರ ಕುಂದಾಪುರ ಕ್ಷೇತ್ರಕ್ಕೆ ಮಾತ್ರವಲ್ಲದೇ ಕರ್ನಾಟಕ ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ,ಪ್ರಶ೦ಸರ್ಹ ಮಳೆಯಲ್ಲಿ ಮೀಯುತ್ತಿದ್ದಾರೆ.ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಸತತ 4 ಬಾರಿ ಶಾಸಕ ಸ್ಥಾನಕ್ಕೆ ಸ್ವರ್ಧಿಸಿ ಗೆದ್ದಿದ್ದರು .ಅಷ್ಟೇ ಸಮಾಜ ಸೇವೆ ,ಪ್ರಾಮಾಣಿಕ ನಿಷ್ಟಾವಂತ ವ್ಯಕ್ತಿ ಎಂದು ಗುರುತಿಸಿ ಕೊಂಡ್ಡಿದ್ದರು .ಯಡಿಯೂರಪ್ಪನವರ  ಸರ್ಕಾರದಲ್ಲಿ ಕೊಂಚ ಪ್ರಯತ್ನಪಟ್ಟಿದ್ದರೆ , ಆ ಸಮಯದಲ್ಲೇ ಮಂತ್ರಿಗಿರಿ ಯನ್ನು ಅಲ೦ಕರಿಸಬಹುದಿತ್ತು.
ಆದರೆ ಪಟ್ಟಕ್ಕಾಗಿ ಎಂದು ಪಟ್ಟು ಹಿಡಿದವರೇ ಅಲ್ಲ  ಎಂಬುದನ್ನು ಅವರ ಮನಸ್ಸಿನ ಆಳ- ಅಂತರಾಳವನ್ನು ಅರಸಿದಾಗ ಅರಿಯಲ್ಪಡುತ್ತದೆ.ಆದರೆ ಕರ್(?) -ನಾಟಕದ  ರಾಜಕೀಯ ಪರಿಸ್ಥಿತಿಯಲ್ಲಿ  ಇನ್ನು ಕೆಲವೇ ತಿಂಗಳುಗಳಿರುವ ಆಡಳಿತ ಪ್ರಕ್ರಿಯೆಯಲ್ಲಿ ಬದಲಾದ ನೂತನ ಬಿ .ಜೆ.ಪಿ ನಾಯಕನಾದ ಜಗದೀಶ್ ಶೆಟ್ಟರ್ ಸಚಿವ ಸಂಪುಟದಲ್ಲಿ ಇವರ ಹೆಸರು ಉನ್ನತ ಮಟ್ಟದಲ್ಲಿ ಗುರುತಿಸಿ ಕೊಂಡಿತು ಅವರಿಗಿದು ಎಳ್ಳಷ್ಟು ಅಪೇಕ್ಷೆ ಇಲ್ಲದಿದ್ದರೂ
ಕಾರ್ಯಕರ್ತರ ,ಅಭಿಮಾನಿಗಳ ,ಹಿತೈಷಿಗಳ ,ಆಪ್ತರ ಒತ್ತಾಯದ ಮೇರೆಗೆ ಅನಾರೋಗ್ಯದ ನಡುವೆಯೂ ಬೆಂಗಳೂರಿಗೆ ಧಾವಿಸಿದರು .ಆದರೆ ಅಲ್ಲಿ ನಡೆದ ಚಿತ್ರಣವೇ ಬೇರೆ .ಇನ್ನೇನು ಹಾಲಾಡಿ  ಪ್ರಮಾಣ ವಚನ ಸ್ವೀಕರಿಸುತ್ತಾರೆ  ಎಂದು ಎಲ್ಲರೂ ನ೦ಬಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಹೆಸರು ಬದಲಾವಣೆ ಗೊಂಡಿತು .ನಿಜಕ್ಕೂ ಹಾಲಾಡಿಯವರಿಗೆ ಸೇರಿದಂತೆ ಅವರ ಆಪ್ತರಿಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತ ಅನುಭವವಾಗಿರಬೇಕು
ಮಂತ್ರಿಗಿರಿ ಕೊಡುತ್ತೇನೆಂದು ಇವರನ್ನು ಕರೆಯಿಸಿ ಈ ರೀತಿ ಅವಮಾನ ಮಾಡಬಾರದಿತ್ತು ಎಂದು ನೆರದಿದ್ದ ಎಲ್ಲ ಸಭಿಕರು ಹೆಚ್ಚಾಗಿ ವಿರೋಧ ಪಕ್ಷದ ನಾಯಕರುಗಳೇ  ಉಸಿರಿದರು .ನನಗೆ ಅಗೌರವ ಕ್ಷೇತ್ರದ ಜನತೆಗೆ ಅವಮಾನ ಮಾಡಲಾಗಿದೆ ಎಂದು ಕಣ್ಣಿರು ಸುರಿಸಿದರು ತಟ್ಟನೆ  ರಾಜೀನಾಮೆ ಕೊಡುತ್ತೇನೆಂದು ಘೋಷಿಯೇ ಬಿಟ್ಟರು ಅಂತೆಯೇ ಪ್ರವಾಸದಲಿದ್ದ ಸ್ಪೀಕರ್ ಆಗಮನದ ನಂತರ ರಾಜೀನಾಮೆ ಪತ್ರವನ್ನು ಕೊಟ್ಟೆಬಿಟ್ಟರು .ಕರಾವಳಿಯ ಶಾಸಕರುಗಳಾದ ಬೈ೦ದೂರು ಲಕ್ಷ್ಮಿ ನಾರಾಯಣ ಶೇರಿಗಾರ ,ಮತ್ತು ಉಡುಪಿ ಯ ರಘುಪತಿ ಭಟ್ ರವರು ಬೆಂಗಳೂರಿನಲ್ಲಿ ಶ್ರೀನಿವಾಸರವರಿಗೆ ಮೋಸವಾಗಿದೆ  ತಾವು 
ರಾಜಿನಾಮೆ ಕೊಡುತ್ತೇನೆಂದು ಮಾದ್ಯಮದ ಮುಂದೆ ಬೊಗಳೆ ಬಿಟ್ಟಿದ್ದರು. ಈ ಘಟನೆಗೆ ಒಂದೆಡೆ ಕಾಲ್ ಡ್ಕ ಪ್ರಭಾಕರ ಭಟ್ ಒಂದು ಫೋನ್ ಕಾಲ್  ಇನ್ನೊಂದೆಡೆ ಜಾತಿ ಕೋಟ ದಡಿಯಲ್ಲಿ ಹಾಲಾಡಿ ಗೆ ಮಂತ್ರಿ ಪಟ್ಟ ತಪ್ಪಿ ಹೋಯಿತು ಎಂದು ರಾಜಕೀಯ ವಲಯದಲ್ಲಿ ಕೇಳಿಬಂದವು .ಅಂತೂ ಹಾಲಾಡಿ ಬೆ೦ಬಲಿಗರ ಆಕ್ರೋಶ ,ಹರತಾಳ ,ಘರ್ಷಣೆ ಮುಗಿಲು ಮುಟ್ಟಿತ್ತು. ಕುಂದಾಪುರ ತಾಲೂಕು ಬಂದ್ ಕೂಡ ಆಯಿತು .ಈ ಒಂದು ಹೋರಾಟದಲ್ಲಿ ಕೇವಲ ಅಭಿಮಾನಿಗಳ ಕಾರ್ಯಕರ್ತರು ,ಹಿತೈಶಿಗಳು ಮಾತ್ರ ಪಾಲ್ಗೊಳ್ಳದೆ ಮಹಿಳೆಯರು ,ವಿಧ್ಯಾರ್ಥಿಗಳು ,ಕೆಲವು ಸಂಘ ಸಂಸ್ಥೆಗಳು ಹೋರಾಟಕ್ಕೆ ಇಳಿದವು .ಹೋರಾಟ ಕೇವಲ ಕುಂದಾಪುರ ತಾಲೋಕು ಮಾತ್ರ ಅಲ್ಲದೇ ಮಂಗಳೂರು ,ಮುಂಬಯಿ ,ಬೆಂಗಳೂರುಗಳು ಪ್ರತಿಕ್ರಿಯಿಸಿದವುಯೆನ್ನುದಕ್ಕೆ  ಹಾಲಾಡಿಯವರು ಎಷ್ಟು ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂಬುದಕ್ಕೆ ಇದೆ ಸಾಕ್ಷಿ ಅಲ್ವೇ 
?ರಾಜೀನಾಮೆ ನೀಡಿ ತವರಿಗೆ ಬಂದರೂ ಬಿ ಜೆ ಪಿ ಪಾಳಯದಲ್ಲಿ ಮನವಲಿಸಲು ಸಾಕಷ್ಟು ಕಸರತ್ತು ನಡೆಸಿದ್ದರು .ಹಲವಾರು ಮುಖಂಡರು ಬೆಂಗಳೂರಿನಿಂದ ಹಿಡಿದು ಹಾಲಾಡಿ ಯವರ ಮನೆಯವರೆಗೆ ಬಂದರೂ ನಿರ್ಧಾರವನ್ನುವನ್ನು ಕೈ ಬಿಡಲೇ ಇಲ್ಲ ರಾಜಿನಾಮೆ ನೆಪ ಒಡ್ಡಿ ಸ್ಥಾನ -ಮಾನ ಕ್ಕಾಗಿ ತಂತ್ರ -ಮಂತ್ರ ದ ಹಾದಿ ಯನ್ನು ಹಿಡಿಯುವ  ಕೆಲವು ಹೆಚ್ಚಿನ ರಾಜಕಾರಣಿಗಳ ಮಧ್ಯ ಇಂತವರು ಸಿಗವುದು ಬಹಳ  ಅಪುರೂಪ .ಅಚಲ ನಿರ್ಧಾರವನ್ನು ಮೈಗೂಡಿಸಿ ಕೊಂಡು ಬಾಳುತ್ತಿರುವ ಇವರ ನಿಷ್ಠೆಗೆ  ಇಲ್ಲೊಮ್ಮೆ ಹೆಡ್ ಸಾಪ್ಹ್ ಎನ್ನೋಣವೇ ?