ಪ್ರೀತಿ ಎಂಬುದು ಬೆಂದ ಜೀವಕ್ಕೆ ತಂಪು ನೀಡುವ ಅಮೃತ ! ಬರಡಾದ ಗಿಡದಲ್ಲೂ ಮೊಗ್ಗು ಬೆಳೆದು ಅರಳುವ ಚಂಗುಲಾಬಿ !ಪ್ರೀತಿ ಎಂಬುದು ಸ್ವಾತಿ ಮುತ್ತು !ಶಂಖ ದೊಳಗಿನ ಜೀವಿಯ ಹೃದಯದ ಕವಾಟಗಳ ಸದ್ದಿಗೆ ಕಿವಿಗೊದುವಷ್ಟು ಸೂಕ್ಷ್ಮ..!ಪ್ರೀತಿ ಯ ಲೋಕ ವೆಂದರೆ ರಮ್ಯ ನಂದನ .!ಪ್ರೀತಿಸುವ ಸಮಯವೆಂದರೆ ರಮ್ಯ ಚೈತ್ರ ಕಾಲ!!! ಎನ್ನುತ್ತಾರೆ ಪ್ರೇಮ ಕವಿಯೊಬ್ಬರು .ಪ್ರೀತಿಯನ್ನು ಕೆಲವರು ದೂಷಿಸಬಹುದು .ಕಲವರು ಪ್ರೀತಿಸಬಹುದು .ಮನದ ಆಲಾಪನೆಯನ್ನು ಕೆಲವರು ಎತ್ತಿ ಹೊಯ್ದು ಹಿಮಾಲಯದ ತುತ್ತ ತುದಿಯಲ್ಲಿ ನಿಲ್ಲಿಸಬಹುದು .ಮತ್ತೆ ಕೆಲವರು ಬದುಕಿನ ಪಾತಾಳಕ್ಕೆ ಕೆಡವ ಬಲ್ಲರು .ಆದರೆ ಪ್ರೀತಿಯೆಂಬ ಭಾವದಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ .ಅದು ಪ್ರೀತಿಸುವವರ ನಡತೆಗೆ ಬಿಟ್ಟಿದ್ದು .
"ಪ್ರೀತಿ ಇಲ್ಲದೆ ಹೂವು ಅರಳಿತು ಹೇಗೆ ಮೋಡ ಕಟ್ಟಿತು ಹೇಗೆ ..?" ಎಂಬ ಜಿ .ಎಸ್ .ಶಿವರುದ್ರಪ್ಪ ಸಾಲುಗಳು ಪ್ರೀತಿಯ ಮೂಲ ಅರ್ಥವನ್ನು ಸಾರುತ್ತದೆ.ಪ್ರೀತಿ ಎಂದರೆ ಕೇವಲ ಮಾತಲ್ಲ .ಪ್ರೀತಿ ಎಂದರೆ ಜವಬ್ದಾರಿ ,ಪ್ರೀತಿ ಎಂದರೆ ಬದುಕು ,ಪ್ರೀತಿ ಅನ್ನೋ ಸಂಬಧದೊಳಗೆ ನಂಬಿಕೆ ,ಕಳಕಳಿ ,ಕಾಳಜಿ ,ಸ್ನೇಹ ,ಹೊಂದಾಣಿಕೆ ,ಖುಷಿ ಒಂದಷ್ಟು ಮುನಿಸು ಈ ಎಲ್ಲ ಭಾವಗಳು ಸೇರಿರುತ್ತವೆ .ಪ್ರೀತಿ ಎನ್ನುದು ಸುಂದರವಾದ ಅನುಭವ. ವರ್ಣಿಸಲು ಅಸಾಧ್ಯವಾದ ಭಾವನೆ .ಪ್ರೀತಿಗೆ ಸಾವಿರ ಅರ್ಥಗಳು .ಅವುಗಳನ್ನು ಹೇಳಿಕೊಳ್ಳುವ ದಾರಿಯೂ ನೂರಾರೂ ಬಗೆ . ಪ್ರೀತಿ ಯಾರಲ್ಲಿ ಹೇಗೆ ಹುಟ್ಟುತ್ತದೆ ಹೇಗೆ ಜೀವನದಲ್ಲಿ ಬದಲಾವಣೆ ತರುತ್ತದೆ ಗೊತ್ತಿಲ್ಲ. ಮೊದಲ ನೋಟದಲ್ಲಿ ಹುಟ್ಟುದು ಪ್ರೀತಿಯಲ್ಲ ,ಆಕರ್ಷಣೆ ,ಆದರೆ ಒಬ್ಬರನೊ ಬ್ಬರು ಅರ್ಥ ಮಾಡಿಕೊಂಡಾಗಲೇ ನಿಜವಾದ ಪ್ರೀತಿ ಸಾಧ್ಯ
ಪ್ರೀತಿಗೆ ಯಾವ ಹಂಗಿಲ್ಲ .ಜಾತಿ ,ಧರ್ಮ ,ಪ್ರಾಂತ್ಯ ,ಬಣ್ಣ ಎಲ್ಲವನ್ನೂ ,ಮೀರಿ ನಿಂತ ,ಕಣ್ಣಿಗೆ ಕಾಣದ ,ಹೃದಯ ತಟ್ಟುವಭಾವನೆ ಈ ಪ್ರೀತಿ.ಆದರೆ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಬುಹುತೇಕ ಪ್ರೀತಿ -ಪ್ರೇಮ ಪ್ರಸಂಗವನ್ನು ನೋಡುತ್ತಿದ್ದರೆ ಬಹಳ ನೋವು , ಬೇಸರವೆನ್ನಿಸುತ್ತದೆ .ಮನುಕುಲವನ್ನು ನಡುಗಿಸುವಷ್ಟು ಮಟ್ಟಿಗೆ ಹೋಗಿದೆ ಇತ್ತೀಚಿಗೆ ಎಲ್ಲಿ ನೋಡಿದ್ದರೂ ಯುವಕ -ಯುವತಿ ಪರಾರಿ ,ಪ್ರೇಮಿಗಳು ಪರಾರಿ ,ಆತ್ಮಹತ್ಯೆ ,ಯುವತಿಯ ಬಲತ್ಕಾರ ,ಪ್ರೇಮಿಗಾಗಿ ,ಪ್ರಿಯತಮನಿಗಾಗಿ ಕೊಲೆ ,ಹೀಗೆ ಬರಿ ದುರಂತದ ಪ್ರಕರಣಗಳು ನಡೆಯುತ್ತಿದೆ .ಇದೆಲ್ಲ ನಡೆಯುತ್ತಿರುದು ೯೦ % ಕೇವಲ ಲವ್ ಅರ್ಥಾತ್ ಪ್ರೀತಿ ಇಂದಲೇ.ನಮ್ಮಲ್ಲಿ ಯಾರಿಗೆ ಈ ಪ್ರೀತಿ -ಪ್ರೇಮ ದ ಇಷ್ಟ ಇಲ್ಲ ಹೇಳಿ ?ಲವ್ ಎನ್ನುವ ಬಯಕೆ ಪ್ರಾಥಮಿಕ ಶಾಲೆ ಇಂದಲೇ ಪ್ರಾರಂಬವಾಗುತ್ತದೆ .ಲವ್ ಎನ್ನು ಅರ್ಥ ಗೊತ್ತಿಲ್ಲದಿದ್ದರೂ ,ಪ್ರೀತಿ -ಪ್ರೇಮದ ದ ಚಲನವಲನ ಒಬ್ಬಬರದು ಒ0ನೊಂದು ಬಗೆಯದು .ಇನ್ನು ಹೈಸ್ಕೂಲ್ ,ಕಾಲೇಜ್ ಗಳ ಪ್ರೀತಿಯ ಬಗ್ಗೆ ಮಾತಾಡುದೆ ಬೇಡ ,ಕೇವಲ ಶಾಲಾ-ಕಾಲೇಜ್ ಗಳಲ್ಲಿ ಮಾತ್ರ ವಲ್ಲದೇ,ಎಲ್ಲ ಕ್ಷೇತ್ರಗಳಲ್ಲಿ ,ಹಸೆಮಣೆ ಏರಿದ ಜೋಡಿಗೂ ಪ್ರೀತಿ ಇನ್ನೊಬ್ಬರಲ್ಲಿ ಹಸಿರಾಗಿರುವ ಕತೆ ಬಹಳಷ್ಟಿವೆ .ಪ್ರೀತಿಯೆಂದರೆ ಕೇವಲ ಕಾಮ -ಮೋಹ -ದಾಹದ ಮಜಾ ಉಡಾಇಸುವ ಸಾಧನ ವೆಂಬಂತೆ ಬಿಂಬಿಸಲ್ಪದುತ್ತಿದೆ.ಇನ್ನು ಕೆಲವರ ಪ್ರೀತಿ ಎಂದರೆ ಬಹಳ ವಿಚಿದ್ರಕಾರಿ ಯಾಗಿದೆ .ಕಾಲೇಜ್ ನಲ್ಲಿ ಒಂದು ,ಬಸ್ಸಿನಲ್ಲಿ ಒಂದು ,ಮೊಬೈಲ್ ನೆಲ್ಲಿ ,ನೆಟ್ ನಲ್ಲಿ ,ಹೀಗೆ ಪ್ರೀತಿ ಯ ಪಟ್ಟಿ ಬೆಳೆಯುತ್ತ ಹೋಗುತ್ತದೆ .ಇಂಥ ಶುಚಿ -ರುಚಿ ಪ್ರೇಂ ಕಹಾನಿಗೆ ನಮ್ಮಲ್ಲಿ ಬರವಿಲ್ಲ .ಹುಡುಗನಾದರೂ ಹೇಗೋ ಬಚಾವಾಗುತ್ತಾನೆ.ಆದರೆ ಹೆಣ್ಣನ್ನು ಖಂಡಿತ ವಾಗಿಯೂ ಪುರುಷ ಪ್ರಧಾನ ಸಮಾಜ ರಕ್ಷಿಸುದಿಲ್ಲ .ಇದನ್ನು ಹೆಣ್ಣು ಮಕ್ಕಳು ತೀವ್ರವಾಗಿ ಮನಗಾಣಬೇಕು.ಪ್ರೀತಿಯ ತೆಕ್ಕೆಗೆ ಬೀಳುವ ಬದಲು ಕೊಂಚ ಆಲೋಚನೆ ಮಾಡುದು ಬಹಳ ಮುಖ್ಯ . ಪ್ರೀತಿ ಮಾಡುದು ತಪ್ಪಲ್ಲ ಅದರಿಂದ ಯಾರಿಗೂ ಯಾವಾಗಲೂ ಕಷ್ಟ -ಕಂಟಕವನ್ನು ತರುವಂತೆ ಆಗಬಾರದು .ಪ್ರೀತಿ ಮಾಡಿದರೆ ಮನೆ -ಮನೆತನವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂಬುದು ತಪ್ಪು ತಮ್ಮ ಸಚ್ಚಾರಿತ್ರ್ಯ ,ಸನ್ನಡತೆಯ ಪ್ರೀತಿಯ ನೀತಿಯನ್ನು ಮನೆಯವರಿಗೊಪ್ಪಿಸಿ,ಬಂಧುಗಳ ಅಪ್ಪಣೆ ಮೇರೆಗೆ ಪ್ರೀತಿಯ ರೀತಿಯಲ್ಲಿ ಜೀವನಸಾಗಿಸಬಹುದು.ಪ್ರೀತಿಯ ಇನ್ನೊಂದು ಅರ್ಥ ತ್ಯಾಗ ಎನ್ನುತ್ತಾರೆ ಅದು ಕೇವಲ ಶೇ.1 ರಷ್ಟು ಮಾತ್ರ ಇರಲಿ.ಮುರಿದ್ದು ಬಿದ್ದ ಪ್ರೀತಿಗೆ ವ್ರತ ಕೊರಗೂದು ,ಸೇಡು ತೀರಿಸಿಕೊಳ್ಳುವ ಮಟ್ಟಿಗೆ ಮನಸ್ಸನ್ನು ಕೆಡಿಸಿಕೊಳ್ಳಬೇಡಿ .ಸಾಧ್ಯವಾದರೆ ಸ್ನೇಹಿತರಾಗಿ ಇದ್ದು ಬಿಡಿ.ಅದನ್ನು ಬಿಟ್ಟು ಪ್ರೇಮದ ನೆನಪಿನಲ್ಲೇ ಬದುಕಿರುತ್ತೇನೆ ಅನ್ನುದೆಲ್ಲ ಸರಿಯಲ್ಲ .
ಪ್ರೀತಿಯ ನೆಲೆ -ಬೆಲೆ ಮಹತ್ವದ ತಾಕತ್ತನ್ನು ಹೃದಯಪೂರ್ವಕ ಮನಗೊಂಡು ಮುಂದಡಿ ಇಟ್ಟರೆ ಅಮರರ ಪ್ರೀತಿ ಗೆ ನಿಮ್ಮ ಅಮೋಘ ಕೊಡುಗೆ ಯಾಗಿರುತ್ತದೆ .ನಿಮ್ಮಲ್ಲಿ ಪ್ರಾಮಾಣಿಕ ಪ್ರೀತಿ ,ಶುದ್ಧ ಪ್ರೀತಿ ,ಅಮರ ಪ್ರೀತಿ ಮಧುರ ಪ್ರೀತಿ ,ಸದ್ ಹೃದಯದ ಪ್ರೀತಿಯಾಗಿದ್ದರೆ ,ಗಗನದ ಅಂಚಿನಿಂದ ಮಳೆಯ ವರ್ಷಧಾರೆಯನ್ನು,ಸಮುದ್ರದ ಆಳದಿಂದ ಮುತ್ತು ತಂದು ಕೊಡುತ್ತದಂತೆ .ನಿಜವಾದ ಪ್ರೀತಿಗೆ ಕಾಲವನ್ನು ಹಿಡಿದಿರುವ ಶಕ್ತಿ ಇದೆಯಂತೆ .ಆಕಾಶ ಎಷ್ಟೇ ದೊಡ್ಡದಿದ್ದರೂ ,ಪ್ರೀತಿಯ ಮುಂದೆ ತಲೆ ಬಾಗುತ್ತದೆ .ಎನ್ನುತ್ತಾರೆ ಪ್ರೇಮ ಪಂಡಿತರು .ಏನೆ ಇರಲಿ ,ಶಹಜಾನ್ -ಮಮ್ತಾಜ್ ,ಸಲಿಂ -ಅನಾರ್ಕಲ್ಲಿ ,ದೇವದಾಸ್ -ಪಾರ್ವತಿ,ರೋಮಿಯೋ -ಜೂಲಿಯೆಟ್,ಲೈಲಾ-ಮಜ್ನು ಮುಂದಾದ ಮಹಾನ್ ಪ್ರೇಮಿಗಳನ್ನು ಮೀರಿಸುವಂತಿರಲಿ.ಕೊನೆಯದಾಗಿ ಒಂದು ಮಾತು ಪ್ರೀತಿ ಗೆ ಮೋಸ ಮಾಡಬಹುದು ,ಆದರೆ ಪ್ರೀತಿ ಯಾರಿಗೂ ಮೋಸ ಮಾಡದು...



