ಸೋಮವಾರ, ಸೆಪ್ಟೆಂಬರ್ 26, 2011
ಶನಿವಾರ, ಸೆಪ್ಟೆಂಬರ್ 24, 2011
ಏನಾಯ್ತೋ ? ಯಾಕಿಂಗಾಯ್ತೋ..? ಅಶ್ವಿನಿ .....!
ಏನಾಯ್ತೋ ? ಯಾಕಿಂಗಾಯ್ತೋ..? ಅಶ್ವಿನಿ .....!
ಅದು ಜೂನ್ ೫ ಸೋಮವಾರದ ಆ ದಿನ ಬಹುಶ : ನಮ್ಮ ದೇಶದ ಕ್ರೀಡಾ ಕ್ಷೇತ್ರ ಕ್ಕೆ ಕರಾಳ ದಿನವಾಗಿತ್ತೋ ಏನೋ ? ಆ
ದಿನ ಬಂದ ವಿಚಿತ್ರಕಾರಕ ಅಹಿತಕರ ಸುದ್ದಿ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿತ್ತು .ಕ್ರೀಡಾ ಪ್ರೇಮಿಗಳನ್ನು ಕೋಪ -ಆವೇಶ ,ಕಹಿ ,ದುಃಖ ,ದುಮ್ಮಾನದಲ್ಲಿ ತೇಲಿಸಿಬಿಟ್ಟಿತ್ತು.ಇನ್ನೇನು ಆ ದಿನ ರಾತ್ರಿ ೧೧:೩೦ ಕ್ಕೆ ಜಪಾನ್ ತೆರಳಲು ಎಲ್ಲ ಸಿದ್ದತೆ ಯನ್ನು ಮಾಡಿಕೊಂಡಿದ್ದ ನಮ್ಮ ಭರವಸೆಯ ಭಾರತದ ಚಿನ್ನದ ಚಿಗರೆ, ನಮ್ಮೂರ ಕಣ್ಮಣಿ .ಬಂಗಾರದ ರಾಣಿ ಅಶ್ವಿನಿ ಅಕ್ಕುಂಜೆ ಸೇರಿದಂತೆ ಸಹ ಆಟಗಾರ್ತಿ ಪ್ರಿಯಾಂಕ ಪನ್ವಾರ್ ಅಥ್ಲೆಟಿಕ್ ಚಾಂಪಿಯನ್ ನಲ್ಲಿ ಪಾಲ್ಗೊಳ್ಳಲು ತೆರಳಬೇಕಾಗಿತ್ತು,ಆದರೆ ಕ್ಷಣ ಮಾತ್ರದಲ್ಲಿ ಬಂದ ಉದ್ದೀಪನ ಮದ್ದು (ಡ್ರಗ್ಸ್ )ಸೇವನೆ ಪರೀಕ್ಷೆಯಲ್ಲಿಯಲ್ಲಿ ಸಿಕ್ಕ ಬಿದ್ದಿರುವ ಸುದ್ದಿ ಈರ್ವರನ್ನು ದಂಗು ಪಡಿಸಿದ್ದಲ್ಲದೆ ,ಇಡಿ ಜಗತ್ತನ್ನೇ ಒಮ್ಮೆ ತಲ್ಲಣಿಸುವಂತೆ ಮಾಡಿತು.ಕ್ರೀಡಾ ಪ್ರೇಮಿಗಳ ಅಭಿಮಾನಿಗಳ ಹಿತೈಷಿಗಳ ಮನ:ಪಟಳಗಳು ತಲ್ಲಣ -ತಟವಟ ದಲ್ಲಿ ನೆಮ್ಮದಿಯ ದುರ್ಭಿನು ಕಳಚಿ ಹೋಗಿತ್ತು .ನಿರೀಕ್ಷೆಯ ತಾರಾಲೋಕ ಮಣ್ಣು ಪಾಲಾಯಿತು ."ರಾಷ್ಟೀಯ ಉದ್ದೀಪನ ಮದ್ದು ತಡೆ ಘಟಕ" (ನಾಡಾ) ಜೂನ್ ೨೭ ರಂದು ಪಟಿಯಳದಲ್ಲಿ ಇವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು .ಅದರಲ್ಲಿ 'ಅನಬಾಲಿಕ್ ',(ಸ್ಟಿರಾಯಡ್) ತೆಗೆದು ಕೊಂಡಿರುದು ಸಾಬೀತಾಯಿತು .
ಈ ನಿಷೇದಿತ ಮದ್ದಿನ ಸೇವನೆ ಇಂದಾಗಿ ಜುಲಾಯ್ ೪ ರಿಂದ ೧೧ ರವರೆಗೆ ನಡೆಯುವ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಿಂದ ಹೊರ ಬಿದ್ದಿದ್ದಾರೆ.ಇದರಿಂದ ದೇಶಕ್ಕೆ ನಸ್ಟವಲ್ಲದೆ ಅಭಿಮಾನಿಗಳಿಗೆ ಬಹಳಷ್ಟು ನಿರಾಶೆಯನ್ನು ತಂದಿದೆ .ಒಟ್ಟಾರೆಯಾಗಿ ಎಂಟು ಮಂದಿ ಅಥ್ಲೆಟಿಕ್ ಗಳು ಒಂದೇ ರೀತಿಯ ಈ ಉದ್ದೀಪನ ಸೇವಿಸಿ ಸಿಕ್ಕಿಬಿದ್ದಿರುವದು ಖಂಡಿತವಾಗಿಯೂ ಪ್ರಜ್ಞಾವಂತರಲ್ಲಿ ಸಂಶಯವನ್ನು ಉಂಟುಮಾಡಿದೆ .ಇದರಲ್ಲಿ ಕೇವಲ ಅಥ್ಲೆಟಿಕ್ ಆಟಗಾರರ ಪತ್ರ ಎಳ್ಳಷ್ಟು ಇಲ್ಲ .ಕಾರಣ ಯಾವುದೇ ಒಂದು ಕಾರ್ಯಕ್ರಮ ನಡೆಯುವಲ್ಲಿ ಒಬ್ಬ ಮುಖ್ಯಸ್ಥ ,ನಿರ್ಧೇಶಕ ,ಕೋಚ್ ,ಅದಕ್ಕೆ ಸಂಭಂದಿಸಿದ ವರ್ಗದವರ ಸಮ್ಮುಖ ದಲ್ಲಿಯೇ ಕಾರ್ಯ ಚಟುವಟಿಕೆ ನಡೆಯುತ್ತದೆ ..ಇಂಥಹ ತರಬೇತಿ ಕೇಂದ್ರದಲ್ಲಿ ಅಧಿಕಾರಿಗಳ ಅಪ್ಪಣೆ ಮೇರೆಗೆ ದೈನಂದಿನ ಚಟುವಟಿಕೆ ಗಳು ನೆಡೆಯುವಾಗ ,ಆಹಾರ ಮತ್ತಿತರ ಅವಶ್ಯಕ ವಸ್ತುಗಳು ಅಲ್ಲಿಂದಲೇ ಸರಬರಜಾಗುತ್ತಿರುವಾಗ,ಇದು ಹೇಗೆ ಸಾಧ್ಯ? ಇರುವ ಎಂಟು ಮಂದಿ ಒಂದೇ ತರಹದ ನಿಷೇದಿತ ಪಧಾರ್ಥ ಸೇವಿಸಿರುದಕ್ಕೆ ಅಲ್ಲಿನ ಅವ್ಯವಸ್ತೆ ಯೇ(?) ಆಹಾರವೇ ಸರಿ ಎನ್ನುದರಲ್ಲಿ ಎರಡು ಮಾತಿಲ್ಲ .ಇದು ಉದ್ದೇಶಪೂರ್ವಕ ವಾಗಿ ಉದ್ದೀಪನ ಮದ್ದನ್ನು ಕೋಚ್ಗಳ ಪಿಕ್ಸಿಂಗ್ ವ್ಯವಹಾರದಲ್ಲಿ ,ದೇಶಕ್ಕೆ ಕೆಟ್ಟ ಹೆಸರನ್ನು ತರಲು, ಕ್ರೀಡಾ ಕ್ಷೇತ್ರದ ಅಭಿರುದ್ದಿ ಯಲ್ಲಿರುವ ದೇಶದ ಹೆಸರಿಗೆ ಕಪ್ಪು ಚುಕ್ಕೆಯನ್ನು ಇಡಲು ಅಲ್ಲಿ ನಡೆಸಲ್ಪಟ್ಟ ರಿಯಲ್ ಕಹಾನಿ ಯಷ್ಟೇ !! ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಯನ್ನು ಮಾಡುತ್ತಿರುವ ಅಶ್ವಿನಿಯೂ ಸೇರಿದಂತೆ ಇನ್ನಿತರ ಕ್ರೀಡಾ ಬಾಳ್ವೆಯಾ ಮನಸ್ಸನ್ನು ಚಿವಟಿ ಹಾಕಿ ಏನು ಮಾಡದ ತಪ್ಪಿಗೆ ಇವರುಗಳನ್ನು ಬಲಿಪಶುಗಳನ್ನಾಗಿ ಮಾಡಿದ್ದಾರೆ ಈ ಕ್ರೀಡಾ ಕಣಿಗಳ ಮುಗ್ಧ ಮನಸ್ಸನ್ನು ಅರ್ಥೆಸಿ ಕೊಳ್ಳುವವರು ಯಾರು ? ಇಂಥಹ ಘೋರ ಕಾರ್ಯವನ್ನು ಕೈಗೊಂಡ ಕೋಚ್ಗಳ ವರ್ಣ ವೈಖರಿಗೆ ಯಾವ ಶಿಕ್ಷೆ ವಿಧಿಸಿದರೂ ಕಡಿಮೆಯೇ ಇದರ ಬಗ್ಗೆ ಸೂಕ್ತ ತನಿಖೆ ಯಾಗಬೇಕಿದೆ.ತಪ್ಪಿತಸ್ತರ ವಿರುದ್ದ ಕ್ರಮ ಕೈ ಗೊಂಡು ಆಟಗಾರರನ್ನು ಪ್ರೋತ್ಸಹಿಸಬೇಕಿದೆ .'ಕೋಚ್ ಗಳು ಕೊಟ್ಟ ಆಹಾರ ಸೇವಿಸಿದ್ದೆ ಇದಕ್ಕೆ ಮೂಲ ಕಾರಣ" ವೆನ್ನುವ ಅಶ್ವಿನಿಯ ಮಾತಿನಲ್ಲಿ ನೂರಕ್ಕೂ ನೂರು ಸತ್ಯವಿದೆ .ಇದರಲ್ಲಿ ವಿದೇಶಿ ಕೋಚ್ 'ಯೂರಿ ಬಗ್ನೆಡಿಕ್' ಮತ್ತು ಇತರ ಕೋಚ್ ಗಳ ಕೈವಾಡ ವಿದೆ ಎನ್ನುದು ಪ್ರಜ್ಞಾ ವಂತರ ಅಬಿವ್ಯಕ್ತಿ.ಇವರುಗಳನ್ನು ಬೆಂಡೆತ್ತ ಬೇಕಾಗಿದೆ .
ಇನ್ನು ನಮ್ಮ ಕ್ರೀಡಾಕ್ಷೇತ್ರ ಪ್ರಜ್ನರಹಿತವಾಗಿ ಆಲೋಚಿಸುದನ್ನು ಕೈ ಬಿಡಬೇಕು .ನಮ್ಮಲ್ಲಿ ಅನುಭವಿ ಅದೆಷ್ಟೋ ಕೋಚ್ ಗಳಿಲ್ಲ ಅವರುಗಳನ್ನು ಬಿಟ್ಟು ವಿದೇಶಿ ಕೋಚ್ ಗಳನ್ನೂ ಆಮದು ಮಾಡಿಕೊಳ್ಳುತ್ತಿರುದು ನಿಜಕ್ಕೂ ಅಸ್ವಾಗತರ್ಹ.ಏಕೆಂದರೆ ಬೆಂಕಿಯ ಪಕ್ಕ ಬೆಣ್ಣೆ ಇಟ್ಟರೆ ಏನಾಗುತ್ತದೆ ? ಎಲ್ಲರಿಗೂ ಗೊತ್ತಿರುದೆ ವಿಷಯ .ಮೊದಲೇ ನಮ್ಮನ್ನು ಹಳ್ಳಕ್ಕೆ ದೂಡಲು ಹವಣಿಸುತ್ತಿರುವ ಪರಕೀಯರಿಗೆ ನಾವು ಕರೆದು ಬಾಳೆಲೆ ಹಾಕಿ ಊಟ ಬದಿಸಿದಂತಲವೇ? ಇದು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಅಲ್ಲವೇ ? ಏನಂತೀರಿ ?? ಏನೇ ಇರಲಿ 'ನೀರಿದ್ದಲ್ಲಿ ಕೊಳಕು ಇದ್ದೆ ಇರುತ್ತದೆ " ಎನ್ನುವ ಲೋಕ ರೂಢಿಯಂತೆ ,'ಆಗಿದ್ದೆಲ್ಲ ಒಳ್ಳೇದಕ್ಕೆ' ಎನ್ನುವ ಮಾತಿಲ್ಲವೇ?, ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ' ಕ್ರೀಡೆ ಬಗ್ಗೆ ಅಭಿಮಾನ ವಿರಲಿ ,ಮುಂಬರುವ ಒಲಂಪಿಕ್ಸ್ ಮನದಲ್ಲಿರಲಿ ಇನ್ನೊಮ್ಮೆ ಕ್ರೀಡಾ ಪ್ರೇಮಿಗಳ ಮನದಲ್ಲಿ ಉತ್ಸಾಹ -ಉಲ್ಲಾಸ ವನ್ನು ಹೊಮ್ಬಿಸುವ ಅನಿವಾರ್ಯತೆ ,ಅದಮ್ಯತೆ ,ಅಜೇಯತೆ ಸಿಗಲಿ ಯೆನ್ನುದೆ ನನ್ನ ಓಡಲದ್ವನಿ ಯ ಆಶಯ ..........
ದಿನ ಬಂದ ವಿಚಿತ್ರಕಾರಕ ಅಹಿತಕರ ಸುದ್ದಿ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿತ್ತು .ಕ್ರೀಡಾ ಪ್ರೇಮಿಗಳನ್ನು ಕೋಪ -ಆವೇಶ ,ಕಹಿ ,ದುಃಖ ,ದುಮ್ಮಾನದಲ್ಲಿ ತೇಲಿಸಿಬಿಟ್ಟಿತ್ತು.ಇನ್ನೇನು ಆ ದಿನ ರಾತ್ರಿ ೧೧:೩೦ ಕ್ಕೆ ಜಪಾನ್ ತೆರಳಲು ಎಲ್ಲ ಸಿದ್ದತೆ ಯನ್ನು ಮಾಡಿಕೊಂಡಿದ್ದ ನಮ್ಮ ಭರವಸೆಯ ಭಾರತದ ಚಿನ್ನದ ಚಿಗರೆ, ನಮ್ಮೂರ ಕಣ್ಮಣಿ .ಬಂಗಾರದ ರಾಣಿ ಅಶ್ವಿನಿ ಅಕ್ಕುಂಜೆ ಸೇರಿದಂತೆ ಸಹ ಆಟಗಾರ್ತಿ ಪ್ರಿಯಾಂಕ ಪನ್ವಾರ್ ಅಥ್ಲೆಟಿಕ್ ಚಾಂಪಿಯನ್ ನಲ್ಲಿ ಪಾಲ್ಗೊಳ್ಳಲು ತೆರಳಬೇಕಾಗಿತ್ತು,ಆದರೆ ಕ್ಷಣ ಮಾತ್ರದಲ್ಲಿ ಬಂದ ಉದ್ದೀಪನ ಮದ್ದು (ಡ್ರಗ್ಸ್ )ಸೇವನೆ ಪರೀಕ್ಷೆಯಲ್ಲಿಯಲ್ಲಿ ಸಿಕ್ಕ ಬಿದ್ದಿರುವ ಸುದ್ದಿ ಈರ್ವರನ್ನು ದಂಗು ಪಡಿಸಿದ್ದಲ್ಲದೆ ,ಇಡಿ ಜಗತ್ತನ್ನೇ ಒಮ್ಮೆ ತಲ್ಲಣಿಸುವಂತೆ ಮಾಡಿತು.ಕ್ರೀಡಾ ಪ್ರೇಮಿಗಳ ಅಭಿಮಾನಿಗಳ ಹಿತೈಷಿಗಳ ಮನ:ಪಟಳಗಳು ತಲ್ಲಣ -ತಟವಟ ದಲ್ಲಿ ನೆಮ್ಮದಿಯ ದುರ್ಭಿನು ಕಳಚಿ ಹೋಗಿತ್ತು .ನಿರೀಕ್ಷೆಯ ತಾರಾಲೋಕ ಮಣ್ಣು ಪಾಲಾಯಿತು ."ರಾಷ್ಟೀಯ ಉದ್ದೀಪನ ಮದ್ದು ತಡೆ ಘಟಕ" (ನಾಡಾ) ಜೂನ್ ೨೭ ರಂದು ಪಟಿಯಳದಲ್ಲಿ ಇವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು .ಅದರಲ್ಲಿ 'ಅನಬಾಲಿಕ್ ',(ಸ್ಟಿರಾಯಡ್) ತೆಗೆದು ಕೊಂಡಿರುದು ಸಾಬೀತಾಯಿತು .
![]() |
| ಸಂಗ್ರಹ |
![]() |
| ಸಂಗ್ರಹ |
* ಶಿವು..............
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)