ಕತ್ತಲೆ ಬೆಳಕಿನ ಸಂಜೀವಿನಿ : ನಮ್ಮೂರ ವಾರಾಹಿ ಭೂ ಗರ್ಭ ವಿದ್ಯುದಾಗಾರ
ಕರ್ನಾಟಕ ರಾಜ್ಯದ ಮೊಟ್ಟ-ಮೊದಲ ಭೂ- ಗರ್ಭ ವಿದ್ಯುದಾಗಾರ (undergrond powerhouse ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ .ಸರ್ .ಎಂ .ವಿಶ್ವೇಶರಯ್ಯ ನವರ ದಿವ್ಯ ದ್ರಸ್ಟಿಯ ಕ್ರಪಕಟಾಕ್ಷದಿಂದ, ಪಿಕ್- ಆಪ್ ಡ್ಯಾಂ ಮತ್ತು ಮಾಣಿ ಡ್ಯಾಂ ನಿಂದ ವಾರಾಹಿ ನದಿಯಾಗಿ ನೀರನ್ನು ಹಾಹಿಸಿ ಸುಮಾರು 5 .08 ದಶಲಕ್ಷ ಘನ ಮೀ .ಗಾತ್ರ ದ ಬಂಡೆಯನ್ನು ಕೊರಯಿಸಿ, 6 .9 ಕಿ.ಮೀ. ಸುರಂಗ ಮಾರ್ಗದ ಹೊಂದಿರುವ ಈ ವಿದ್ಯುದಾಗಾರ ನಮ್ಮೂರ ಹೆಮ್ಮೆಯ ಕೀರ್ತಿ ಪ್ರಕಾಶತೆಗೆ, ಹಿಡಿದ ಕೈಗನ್ನಡಿ ...
![]() |
ಭೂ -ಗರ್ಭ ಜಲವಿದ್ಯುದಾಗರದ ಸ್ವಾಗತ ಹೊರ ನಾಮಫಲಕ |
ವಾರಾಹಿ ನದಿ : ವಾರಾಹಿ ನದಿ ಯು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದ ಆಗುಂಬೆಯ ಸಮೀಪ ಇರುವ ಹೆಬ್ಬಾಗಿಲು ಎಂಬಲ್ಲಿ ಸಮುದ್ರ ಮಟ್ಟದಿಂದ ಸುಮಾರು 730 ಮೀ . ಎತ್ತರದಲ್ಲಿ ಉಗಮಿಸಿ, ಕುಂದಾಪುರ ದ ಬಳಿ ಅರಬ್ಬಿಸಮುದ್ರ ವನ್ನು ಸೇರುತ್ತದೆ .ವಾರಾಹಿಯು ಅರಬ್ಬಿಸಮುದ್ರ ಕ್ಕೆ ಸೇರುವ ಮೊದಲು ರಾಜ್ಯದ ಅನೇಕ ಮನೆಗಳಿಗೆ ಬೆಳಕಾಗಿ, ಕೈಗಾರಿಕೆಗಳಿಗೆ ಪೂರಕ ಶಕ್ತಿ ಯಾಗಿ ನಿಲ್ಲುತ್ತಾಳೆ .
ವಾರಾಹಿ ಯೋಜನೆ ಯ ಮೊದಲ ಹಂತ ವು 3 ಅಣೆಕಟ್ಟುಗಳನ್ನು ಹೊಂದಿದ್ದು,ಒಂದು ಆಣೆಕಟ್ಟು ವಿದ್ಯುದಾಗಾರ ಮತ್ತು ಒಂದು ಭೂ ಗರ್ಭ ವಿದ್ಯುದಗಾರವನ್ನು ಹೊಂದಿದೆ
1 ) ಮಾಣಿ ಆಣೆಕಟ್ಟು : ಹೊಸನಗರ ತಾಲೂಕು,ಶಿವಮೊಗ್ಗ ಜಿಲ್ಲೆಯ ಮಾಣಿ ಎಂಬ ಹಳ್ಳಿಯ ಹತ್ಹಿರವಿದ್ದೂ ,ಇದರ ಎತ್ತರ 5 .9 ಮೀ.ಮತ್ತು ಉದ್ದ 585 ಮೀ. ಜಲಾಶಯದ ಪೂರ್ಣ ಮಟ್ಟ 594 .36 ಮೀ. ಮಾಣಿ ಅಣೆಕಟ್ಟಿಗೆ ಎಡದಂಡೆ ಯಲ್ಲಿ 9 ಹಾಗೂ ಬಲ ದಂಡೆಯಲ್ಲಿ 3 ಮಣ್ಣಿನ ಪಲ್ಲಣ ಕಟ್ಟೆ(saddledam ) ಗಳನ್ನೂ ನಿರ್ಮಿಸಲಾಗಿದೆ .
2 )ಪಿಕ್ ಆಪ್ ಡ್ಯಾಮ್: ಮಾಣಿ ಅಣೆಕಟ್ಟಿನ ಕೆಳ ಹಂತದಲ್ಲಿ ಕುಂಚಿಕಲ್ಲು ಅಭಿ ಜಲಪಾತ ದ ನಿರ್ಮಾಣದ ಹಂತ ದಲ್ಲಿದ್ದೂ, ಇದರ ಎತ್ತರ 37 .60 ಮೀ .ಮತ್ತು ಉದ್ದ 244 ಮೀ .ಈ ಜಲಾಶಯದ ನೀರಿನ ಮಟ್ಟ EL 563 .88 ಮೀ . ಈ ಜಲಾಶಯಕ್ಕೆ ಆಧಾರವಾಗಿ ಬಲ ಪಾರ್ಶ್ವ ದಲ್ಲಿ ಮೂರು ಮಣ್ಣಿನ ಪಲ್ಲಣ ಕಟ್ಟೆ ಗಳನ್ನೂನಿರ್ಮಿಸಲಾಗಿದೆ .
![]() |
ಮಾಣಿ ಡ್ಯಾಮ್ ಮತ್ತು ವಿದ್ಯುದಾಗರದ |
3 ) ಹುಲಿಕಲ್ ಫೋರ್ಬೆ ಆಣೆಕಟ್ಟು : ವಾರಾಹಿ ನದಿಗೆ ಸೇರುವ ಹುಲಿಕಲ್ ಹೊಳೆಗೆ ಹುಲಿಕಲ್ಲಿನ ನಿರ್ಮಿಸಲಗಿದ್ದೂ,40 ಮೀ. ಎತ್ತರ ,422 ಮೀ .ಉದ್ದದ್ದಾಗಿದೆ. ಈ ಜಲಾಶಯದ ಪೂರ್ಣ ಮಟ್ಟ EL 563 .88 ಮೀ .ಮಾಣಿ ಆಣೆಕಟ್ಟು ,ವಿದ್ಯುದಾಗಾರ ದಿಂದ ಉತ್ಪಾದಿಸಲಾಗುವ ವಿದ್ಯುತನ್ನು ಸಾಗಣಿ ತಂತಿಜಾಲದ ಮೂಲಕ ಶಿವಮೊಗ್ಗ -ಮಂಗಳೂರು ಸಾಗಣಿ ತಂತಿ ಜಾಲಕ್ಕೆ ಸೇರಿಸಲಾಗಿದೆ ..
ಭೂ-ಗರ್ಭ ವಿದ್ಯುದಾಗಾರ : ಸುಮಾರು 5 .08 ದಶಲಕ್ಷ ಘನ ಮೀ. ಗಾತ್ರದ ಬಂಡೆಯನ್ನು ಕೊರೆದು ,6 .9 ಕೀ. ಮೀ . ಸುರಂಗ ಮಾರ್ಗ ,1 ,60 ,000 ಮೆಟ್ರಿಕ್ ಟನ್ ಸಿಮೆಂಟ್ ,26 ,000 ಮೆಟ್ರಿಕ್ ಟನ್ ಉಕ್ಕಿನ ಬಳಕೆ ಇಂದ ನಿರ್ಮಾಣವಾಗಿದೆ .335 ಕೋಟಿ ರೂ. ವೆಚ್ಚದ 115 ಮೆಗಾವ್ಯಾಟ್ ನ 2 ಘಟಕ ನಿರ್ಮಾಣವನ್ನು , 1970 ರಲ್ಲಿ ಆರಂಭಿಸಿ ,1989 -90 ಕ್ಕೆ ಪೂರ್ಣ ಗೊಳಿಸಿ 11 -05 -1990 ರಂದು ಅಂದಿನ ಮುಖ್ಯ ಮಂತ್ರಿ ಯಾಗಿದ್ದ ,ಶ್ರೀ ವೀರೇಂದ್ರ ಪಾಟೀಲ್ ರವರ ನೇತ್ರುತ್ವದಲ್ಲಿ ಉದ್ಗಾಟನೆ ಗೊಂಡಿತು ..
![]() |
ಭೂ -ಗರ್ಭ ಜಲವಿದ್ಯುದಾಗರದ ಒಳ ನೋಟ |
ಎರಡೆನೇ ಹಂತದ ಯೋಜನೆ : 2007 ರಿಂದ 2010 ರ ಕಾಲಾವಧಿ ಯಲ್ಲಿ 286 .06 ಕೋಟಿರೂ. ವೆಚ್ಚದ 115 *2 ಮೆಗಾವ್ಯಾಟ್ ನ 2 ನೆ ಘಟಕ ವನ್ನು ಸ್ಥಾಪಿಸಲಾಗಿದ್ದು ,ಇತ್ತಿಚೆಗೆ ಅಂದರೆ 10 -01 -2010 ರಂದು ಮಾಜಿ ಮುಖ್ಯ ಮಂತ್ರಿ ಯದ ಶ್ರೀ ಯಡಿಯೂರಪ್ಪ ನವರಿಂದ ಉದ್ಗಾಟನೆ ಗೊಂಡಿತು
ಇಲ್ಲಿಂದ ಹೊರ ಹಾಕುವ ನೀರನ್ನು 4 ಮೀ. ಎತ್ತರದ ಡ್ಯಾಮ್ನಿಂದ ಅಡ್ಡಗಟ್ಟಿ 2 .6 ಎತ್ತರದ ಸುರಂಗ ಮಾರ್ಗದ ಮೂಲಕ ಹರಸಿ ಉತ್ಪಾದನೆ ಯನ್ನು ಖಾಸಗಿ ಕಂಪನಿಯಾದ ' ಸಂಡೂರ್ ಪವರ್ ಕಂಪನಿ ಯು ನಿರ್ವಹಿಸುತಿದ್ದೂ,30 ವರ್ಷಗಳ ಕಾಲಾವಧಿಯ ನಂತರ ಸರ್ಕಾರಕ್ಕೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ .ಅಲ್ಲಿಂದ ಹೊರಬಿಡುವ ನೀರನ್ನು ತದನಂತರ ಈ ನೀರನ್ನು ಸಿದ್ದಾಪುರ ದ ಬಳಿ ಇರುವ ಜಲಾಶಯದಲ್ಲಿ ಶೇಖರಿಸಿ ಈ ನೀರನ್ನು ನೀರಾವರಿಗೆ ಉಪಯೋಗಿಸಲಾಗುತಿದೆ..
![]() |
| ಭೂ -ಗರ್ಭ ಜಲವಿದ್ಯುದಾಗರದ ಸ್ವಾಗತ ಹೊರ ಗೋಪುರ |
ರಾಜ್ಯ ದಲ್ಲಿ ಹಲವಾರು ಶಾಕೊತ್ಪನ್ನ ಜಲ ವಿದ್ಯುತ್ ಆಗರಗಳಿದ್ದೂ,ಸತತ ಸರದಿ ಪ್ರಕಾರ ಮೂರು ಜಲ ವಿದ್ಯುತ್ ಆಗರ ಅದರಲ್ಲೂ ಭೂ-ಗರ್ಭ ಜಲವಿದ್ಯುತ್ ಆಗರ ಇದು ರಾಜ್ಯದಲ್ಲಿಯೇ ಪ್ರ -ಪ್ರಥಮವಾಗಿದೆ ..ದಿನ -ನಿತ್ಯ ಹಲವರು ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ಈ ಪ್ರದೇಶ ವನ್ನು ಎಲ್ಲರೂ ನೋದಬೇಕದುದ್ದೆ .. ಇದರ ಅಂದ ವನ್ನು ನೋಡಲು ಬಹು ಚೆಂದ ..ಪ್ರವಾಸಿಗರು ಕೇವಲ ಕಣ್ಣಿನಲ್ಲಿಯೇ ತಂಪು ಮಾಡಬೇಕೆ ವಿನಹ ಛಾಯಾ -ಚಿತ್ರ ಕ್ಕೆ ಅವಕಾಶ ಇಲ್ಲ ..........
* ಶಿವಕುಮಾರ್





